ಬೆಳಗಾವಿ : 2028 ರಲ್ಲಿ ನಡೆಯಲಿರುವ ಚುನಾವಣೆ ನಂತರ ನಾನು ಸಹಾ ಮುಖ್ಯಮಂತ್ರಿ ಆಕಾಂಕ್ಷಿ. ಆದರೆ ಸದ್ಯಕ್ಕೆ ನಾನು ಆ ಹುದ್ದೆಯ ಆಕಾಂಕ್ಷಿಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಬದಲಾವಣೆ ವಿಷಯ ಮುಗಿದ ಅಧ್ಯಾಯವಾಗಿದೆ. ಅದು ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗಬೇಕು. ಸಭೆ-ಸಮಾರಂಭದಲ್ಲಿ ಯಾರು ಹೇಳಿದರೆಂದ ಮಾತ್ರಕ್ಕೆ ಅದಕ್ಕೆ ಮಹತ್ವ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.