ಕಲಬುರಗಿ: ಕಿವಿಗೆ ಹಾವು ಕಡಿದು ಮಹಿಳೆ ಸಾವನ್ನಪ್ಪಿದ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸೂಗೂರು(N)ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. ವಿಜಯಲಕ್ಷ್ಮಿ ತೆಳಗೇರಿ(44)ಮೃತ ಮಹಿಳೆ. ಸೂಗೂರು(N) ಗ್ರಾಮದ ಹೊರವಲಯದ ಜಮೀನಿನಲ್ಲಿ ಘಟನೆ ನಡೆದಿದೆ.

ಚಿತ್ತಾಪುರ ತಾಲೂಕಿನ ಸೂಗೂರು(N)ಗ್ರಾಮದ ಮಹಿಳೆ ವಿಜಯಲಕ್ಷ್ಮಿ ಕೂಲಿ ಕೆಲಸಕ್ಕಾಗಿ ಜಮೀನಿಗೆ ತೆರಳಿದ್ದರು. ಕೆಲಸ ಮುಗಿಸಿಕೊಂಡು ಮನೆಗೆ ತೆರಳುವಾಗ ಘಟನೆ ನಡೆದಿದೆ.

ಸಂಜೆ ಮಳೆಯಾಗುತ್ತಿದ್ದರಿಂದ ವಿಜಯಲಕ್ಷ್ಮಿ ಅವರು ಮರದ ಆಸರೆ ಪಡೆದಿದ್ದರು. ಹಾವು ಕುಳಿತಿದ್ದನ್ನು ಗಮನಿಸದೆ ಮರದ ಕೆಳಗೆ ಮಹಿಳೆ ಆಸರೆ ಪಡೆದಿದ್ದರು. ಈ ವೇಳೆ ಮಹಿಳೆಯ ಕಿವಿಗೆ ವಿಷಪೂರಿತ ಹಾವು ಕಚ್ಚಿದೆ. ಹೀಗಾಗಿ ವಿಜಯಲಕ್ಷ್ಮಿ ತೆಳಗೇರಿ ಮೃತಪಟ್ಟಿದ್ದಾರೆ. ಈ ಸಂಬಂಧ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.