ಬೆಳಗಾವಿ: ೨೦೨೪-೨೫ ನೇ ಸಾಲಿನ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ೧-೧೦ನೇ ತರಗತಿಗಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಬೇಸಿಗೆ ರಜೆಯಲ್ಲಿ ಮಧ್ಯಾಹ್ನ ಬಿಸಿಯೂಟವನ್ನು ನೀಡಲಾಗುತ್ತದೆ.
೨೦೨೩-೨೪ ನೇ ಸಾಲಿನ ಬೆಳಗಾವಿ ಜಿಲ್ಲೆಯಲ್ಲಿ ಬರಗಾಲ ಪೀಡಿತ ೧೫ ತಾಲೂಕುಗಳಲ್ಲಿ ಘನ ಸರ್ಕಾರದ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯಡಿಯಲ್ಲಿ ೧ ರಿಂದ ೧೦ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ ಬಿಸಿ ಊಟವನ್ನು ನೀಡಲಾಗುತ್ತದೆ.
ಜಿಲ್ಲೆಯಲ್ಲಿ ಒಟ್ಟು ೩೯೯೮ ಸಾಲೆಗಳಿದ್ದು, ಅದರಲ್ಲಿ ೩೨೩೬ ಬಿಸಿಯೂಟ ವಿತರಣಾ ಕೇಂದ್ರಗಳನ್ನು ಗರುತಿಸಲಾಗಿದೆ. ೧೫೭೫ ಅಡುಗೆ ಕೋಣೆ ಗುರುತಿಸಿ ೮೮೫ ಶಾಲೆಗಳನ್ನು ಜೊಡಿಸಲಾಗಿದೆ. ೮೦೬ ಶಾಲೆಗಳಿಗೆ ಸರ್ಕಾರೇತರ ಸಂಘ ಸಂಸ್ಥೆಗಳು, ಮಹಿಳಾ ಸ್ವಸಹಾಯ ಸಂಘಗಳು ಬಿಸಿಯೂಟ ಸರಬರಾಜಯ ಮಾಡಲು ಗುರುತಿಸಲಾಗಿದೆ. ಒಟ್ಟು ೩೨೦೫೨೯ ಮಕ್ಕಳು ಬಿಸಿಯೂಟ ಸೇವಿಸಲು ಒಪ್ಪಿಗೆ ಸೂಚಿಸಿರುತ್ತಾರೆ. ೪೨೨೯ ಅಡುಗೆ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಾರೆ. ೨೧೨೬ ಉಸ್ತುವಾರಿ ಶಿಕ್ಷಕನ್ನು ಗುರುತಿಸಲಾಗಿದೆ. ೩೮೦ ಉಸ್ತುವಾರಿ ಸಿಬ್ಬಂದಿಯನ್ನು ನೇಮಿಸಲಾಗಿದೆ.
ಬೇಸಿಗೆ ರಜೆಯ ಅವಧಿಯು ಏ.೧೧ ರಿಂದ ಮೇ.೨೮ ರವರೆಗೆ ಒಟ್ಟು ೪೧ ದಿನಗಳ ಅವಧಿಯಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ರಾಹುಲ್ ಶಿಂಧೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.