ಬೆಳಗಾವಿ : ಮಜಗಾವಿಯ ಶ್ರೀಮತಿ ನೇಮವ್ವ ಕುಡಚಿ ಪ್ರೌಢ ಶಾಲೆಯಲ್ಲಿ ದಿನಾಂಕ 18/08/2024 ರಂದು 25 ವರ್ಷದ ನಂತರ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಸಲಾಯಿತು.

1998-99 ಸಾಲಿನ ವಿದ್ಯಾರ್ಥಿಗಳಿಂದ ಎಲ್ಲ ನಿವೃತ್ತ ಶಿಕ್ಷಕರಿಗೆ ವಾದ್ಯಗಳಿಂದ ಸ್ವಾಗತ ಕೋರಿ ವಿದ್ಯಾರ್ಥಿಗಳಿಂದ ಎಲ್ಲ ಶಿಕ್ಷಕರು ಹಾಗೂ ಕಚೇರಿಯವರಿಗೂ ಶಾಲು ಹಾಕಿ ಫಲ ಪುಷ್ಪ ನೀಡಿ ಗೌರವಿಸಲಾಯಿತು.

ನಿವೃತ್ತ ಶಿಕ್ಷಕರಾದ ಬಿ.ಡಿ.ಕುಡಚಿ, ಎಸ್.ಎ.ಪಾಟೀಲ, ಎಸ್.ಎಸ್. ಬೈರಪ್ಪನವರ,ಪಿ.ಟಿ. ಮಹೇಂದ್ರಕರ, ಎಸ್.ಡಿ. ಸುತಾರ,ಎ.ಡಿ.ಕುಡಚಿ, ಎಂ.ಎಂ. ಪಾಟೀಲ, ಸಿ.ಎಸ್‌.ಮಜುಕರ್,ವಿ.ಬಿ. ದಿಗ್ಗಾಯಿ, ಈಗಿನ ಪ್ರಾಂಶುಪಾಲರು ಉಪಸ್ಥಿತರಿದ್ದರು.
ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಕ್ಷಣಗಳನ್ನು ನೆನಪಿಸಿಕೊಂಡು ಪುಳಕಗೊಂಡರು. ತಮ್ಮ ಜೀವನದ ಅಮೂಲ್ಯ ಕ್ಷಣ ಎಂದು ಸ್ನೇಹಿತರ ಬಳಿ ಸಂತಸ ಹಂಚಿಕೊಂಡರು.
ಪದ್ಮರಾಜ ಬಸ್ತವಾಡ ಹಾಗೂ ಸಚಿನ ಸುತಾರ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಧರ್ಮು ಮೇತ್ರಿ ವಂದಿಸಿದರು.