ಬೆಳಗಾವಿ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಜಿಲ್ಲಾಘಟಕ ಅಮವಾಸ್ಯೆಯ ಅನುಭಾವಗೋಷ್ಠಿ ಮಾ.10 ರಂದು ಸಂಜೆ 5 ಗಂಟೆಗೆ, ಲಿಂಗಾಯತ ಭವನ, ಶಿವಬಸವ ನಗರ ನಡೆಯಲಿದೆ.

ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಡಾ.ಬಸಮ್ಮ ಗಂಗನಳ್ಳಿ ಮುಖ್ಯಸ್ಥರು ಕನ್ನಡ ವಿಭಾಗ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬೆಳಗಾವಿ ಇವರು “ಶರಣೆಯರ ವಚನಗಳಲ್ಲಿ ನುಡಿ ಪರಿಕಲ್ಪನೆ” ಎಂಬ ವಿಷಯದ ಮೇಲೆ ಅನುಭಾವ ನೀಡಲಿದ್ದಾರೆ. ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅಧ್ಯಕ್ಷತೆ ವಹಿಸುವರು.

ಕಾರಣ ಎಲ್ಲ ಬಸವಾಭಿಮಾನಿಗಳು ಸಮಯಕ್ಕೆ ಸರಿಯಾಗಿ ಆಗಮಿಸಿ ಅಮವಾಸ್ಯೆಯ ಅನುಭಾವಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಪ್ರಧಾನ ಕಾರ್ಯದರ್ಶಿಗಳು ವಿನಂತಿಸಿಕೊಂಡಿದ್ದಾರೆ.