ಕುಕ್ಕೆ ಸುಬ್ರಹ್ಮಣ್ಯ : ದೇವಸ್ಥಾನಕ್ಕೆ ಆಗಮಿಸಿದ ಮಹಿಳೆಯೊಬ್ಬರ ಮಗುವನ್ನು ನಾಯಿ ಒಂದು ರಕ್ಷಿಸಿದ ಘಟನೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿದೆ.
ಈ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೀಡಾಗಿದೆ. ಮಹಿಳೆಯೊಬ್ಬರು ತಮ್ಮ ಮಗುವನ್ನು ರಸ್ತೆ ಬಳಿ ಬಿಟ್ಟು ಹಣ್ಣುಕಾಯಿ ಖರೀದಿಗೆ ಅಂಗಡಿಗೆ ಹೋಗಿದ್ದಾರೆ. ಅದೇ ಸಂದರ್ಭದಲ್ಲಿ ನಾಗರಹಾವು ರಸ್ತೆ ದಾಟುತ್ತಿತ್ತು. ರಸ್ತೆಗೆ ಬಂದಿದ್ದ ಮಗು ಹಾವನ್ನು ತುಳಿಯುವಷ್ಟರಲ್ಲಿ ಅಲ್ಲೇ ಮಲಗಿದ್ದ ಬೀದಿನಾಯಿ ಹೋಗಿ ಮಗುವಿಗೆ ಅಡ್ಡ ನಿಂತು ಮಗು ಹಾವನ್ನು ತುಳಿಯದಂತೆ ರಕ್ಷಿಸಿದೆ. ನಂತರ ಹಾವು ರಸ್ತೆ ದಾಟಿದೆ. ಮಗುವನ್ನು ರಕ್ಷಿಸಿದ ನಾಯಿಯನ್ನು ಗಮನಿಸಿದ ಪ್ರತ್ಯಕ್ಷದರ್ಶಿಗಳು ಘಟನೆಗೆ ಆಶ್ಚರ್ಯಚಕಿತರಾಗಿದ್ದಾರೆ