ಬೆಳಗಾವಿ : ಇಂದು ಬೆಳಗ್ಗೆ ಸರಕಾರಿ ಸಾರಿಗೆ ಸಂಸ್ಥೆಯ ಬಸ್ಸಿನ ಚಕ್ರಕ್ಕೆ ಸಿಲುಕಿ ವೃದ್ದೆ ದುರ್ಮರಣ ಹೊಂದಿದ್ದಾರೆ.

ಬೆಳಗಾವಿ ಚನ್ನಮ್ಮ ವೃತ್ತದ ಬಳಿ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ವೃದ್ದೆ ಮಾತ್ರ ಇದ್ದರು. ಅವರ ಹೆಸರು ಮತ್ತು ಊರಿನ ಮಾಹಿತಿ ಲಭ್ಯವಾಗಲಿಲ್ಲ. ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ಹಾಗೂ ನಾಗರಿಕರು ನಜ್ಜುಗುಜ್ಜಾಗಿದ್ದ ಅವರ ಶವವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದರು.