ಬೆಳಗಾವಿ :
ಸವದತ್ತಿ ಯಲ್ಲಮ್ಮ ಪುರಸಭೆ ವ್ಯಾಪ್ತಿಯಲ್ಲಿ ಡೇ-ನಲ್ಮ್ ಯೋಜನೆಯಡಿ ಮರು “ಸಮುದಾಯ ಸಂಪನ್ಮೂಲ ವ್ಯಕ್ತಿಗಳ” ಹುದ್ದೆಗಳನ್ನು ಗೌರವಧನ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಅರ್ಹ ಸ್ವ- ಸಹಾಯ ಸಂಘಗಳ/ಒಕ್ಕೂಟಗಳ ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸದರಿ ಪುರಸಭೆಗೆ ಒಟ್ಟು 2 ಹುದ್ದೆ ಇದ್ದು ಗೌರವಧನ ಮಾಸಿಕ ರೂ. 8 ಸಾವಿರ ಹಾಗೂ ಪ್ರಯಾಣ ಭತ್ಯೆ ಗರಿಷ್ಟ 2 ಸಾವಿರ ರೂ. ನೀಡಲಾಗುವುದು.
18 ರಿಂದ 45 ವಯೋಮಿತಿಯಲ್ಲಿರುವವರು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಆಸಕ್ತರು ಕಾರ್ಯಾಲಯದ ಅವಧಿಯಲ್ಲಿ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಸ್ವಯಂ ದೃಢೀಕೃತ ದಾಖಲೆಗಳೊಂದಿಗೆ ಜನೇವರಿ 5, 2024 ಸಂಜೆ 4.30 ರೊಳಗಾಗಿ ಸಲ್ಲಿಬಹುದು.
ಹೆಚ್ಚಿನ ಮಾಹಿತಿಯಾಗಿ ಈ ಕಾರ್ಯಾಲಯಕ್ಕೆ ಸಂಪರ್ಕಿಸಬಹುದು ಎಂದು ಸವದತ್ತಿ ಯಲ್ಲಮ್ಮ ಪುರಸಭೆಯ ಮುಖ್ಯಾಧಿಕಾರಿ ಪಿ.ಎಂ.ಚನ್ನಪ್ಪನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.