ಸುಬ್ರಮಣ್ಯ :
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೂಲಮೃತಿಕಾ ಪ್ರಸಾದ ತೆಗೆಯುವ ಕಾರ್ಯಕ್ರಮ
ಇಂದು ನಡೆಯಲಿದೆ. ಬೆಳಗ್ಗಿನಿಂದ ಅಪರಾಹ್ನ ಗಂಟೆ 2.00 ರ ತನಕ ಶ್ರೀ ದೇವರ ದರ್ಶನ ಅವಕಾಶವಿರುವುದಿಲ್ಲ

ಕುಕ್ಕೆ ಶ್ರೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭ ನಡೆಯುವ “ಮೂಲಮೃತಿಕಾ”ಪ್ರಸಾದ ತೆಗೆಯುವ ಕಾರ್ಯಕ್ರಮ ನಡೆಯಲಿರುವುದರಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಬೆಳಗ್ಗಿನಿಂದ ಅಪರಾಹ್ನ ಗಂಟೆ 2.00 ರ ವರೆಗೆ ಶ್ರೀ ದೇವರ ದರ್ಶನ ಹಾಗೂ ಸೇವೆ ನೆರವೇರಿಸಲು ಅವಕಾಶವಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.