ದೆಹಲಿ : ನೀಟ್ ಪರೀಕ್ಷೆಯ ಫಲಿತಾಂಶದಲ್ಲಿ ಮಂಗಳೂರಿನ ಎಕ್ಸ್‌ಪರ್ಟ್‌ ಕಾಲೇಜಿನ ಅರ್ಜುನ್ ಕಿಶೋರ್ 720ಕ್ಕೆ 720 ಅಂಕಗಳೊಂದಿಗೆ ದೇಶಕ್ಕೆ ಮೊದಲ ಬ್ಯಾಂಕ್ ಪಡೆದುಕೊಂಡಿದ್ದಾನೆ. ಅರ್ಜುನ್ ಜೊತೆ ರಾಜ್ಯದ ಇನ್ನಿಬ್ಬರು ಅಗ್ರ ಬ್ಯಾಂಕ್ ಪಡೆದಿದ್ದಾರೆ.

ಬೆಂಗಳೂರಿನ ವಿ. ಕಲ್ಯಾಣ್, ಶ್ರೇಯಸ್ ಜೋಸೆಫ್ ಈ ಸಾಧನೆ ಮಾಡಿದ್ದಾರೆ. ದೇಶದಲ್ಲಿ 14 ವಿದ್ಯಾರ್ಥಿನಿಯರ ಸಹಿತ ಒಟ್ಟು 67 ವಿದ್ಯಾರ್ಥಿಗಳು ಮೊದಲ ಬ್ಯಾಂಕ್ ಹಂಚಿಕೊಂಡಿದ್ದಾರೆ. ಅರ್ಜುನ್ ದ್ವಿತೀಯ ಪಿಯುಸಿಯಲ್ಲಿ 99.8% ಅಂಕ ಗಳಿಸಿದ್ದರು.