ದೆಹಲಿ:
ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 30 ರಂದು ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣ ಮತ್ತು ಹೊಸದಾಗಿ ನವೀಕರಿಸಿದ ರೈಲ್ವೆ ನಿಲ್ದಾಣವನ್ನು ಉದ್ಘಾಟಿಸುವ ಮೂಲಕ ರಾಮ ಮಂದಿರದ ಪ್ರಾಣ ಪ್ರತಿಷ್ಠೆ ಸಮಾರಂಭಕ್ಕೆ ವೇದಿಕೆ ಸಿದ್ಧಪಡಿಸಿದ್ದಾರೆ.
ಅಯೋಧ್ಯೆ ನಗರ ಜನವರಿ 22 ರಂದು ರಾಂ ಮಂದಿರದ ಉದ್ಘಾಟನೆಗೆ ಮುಂಚಿತವಾಗಿ ಗಮನಾರ್ಹವಾದ ರೂಪಾಂತರಕ್ಕೆ ಒಳಗಾಯಿತು, ತಜ್ಞರು ಧಾರ್ಮಿಕ ಪ್ರವಾಸೋದ್ಯಮದಲ್ಲಿ ಗಣನೀಯ ಏರಿಕೆಯನ್ನು ಊಹಿಸಿದ್ದಾರೆ.

ಭಾರತದ ಪ್ರಮುಖ ಬಜೆಟ್ ಹೋಟೆಲ್‌ಗಳ ಸರಪಳಿಯಾದ ಓಯೋ(OYO) ಸಂಸ್ಥಾಪಕ ಮತ್ತು ಸಿಇಒ ರಿತೇಶ್ ಅಗರ್ವಾಲ್, ಹೊಸ ವರ್ಷದ ಮುನ್ನಾದಿನದ ಅಂಕಿ-ಅಂಶಗಳನ್ನು ಹಂಚಿಕೊಂಡಿದ್ದು, ಪರ್ವತ ಪ್ರದೇಶಗಳು ಅಥವಾ ಕಡಲತೀರಗಳಂತಹ ಸಾಂಪ್ರದಾಯಿಕ ಪ್ರವಾಸಿ ತಾಣಗಳನ್ನು ಸಹ ಮೀರಿಸುವಂತೆ ಅಯೋಧ್ಯೆ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ ಎಂಬುದನ್ನು ಈ ಮಾಹಿತಿಯು ಒತ್ತಿಹೇಳಿದೆ.

ಡಿಸೆಂಬರ್ 31 ರಂದು, ಶೇಕಡಾ 80ಕ್ಕೂ ಹೆಚ್ಚು ಬಳಕೆದಾರರು ಅಯೋಧ್ಯೆಯಲ್ಲಿ ಉಳಿಯಲು ಆನ್‌ಲೈನ್‌ ನಲ್ಲಿ ಹುಡುಕಾಟ ನಡೆಸಿದ್ದಾರೆ. ವೇದಿಕೆ (platform)ಯು ಅತ್ಯಧಿಕ ಹೆಚ್ಚಳವನ್ನು ಕಾಣುತ್ತಿದೆ ಎಂದು ಅಗರ್ವಾಲ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. OYO ಸಂಸ್ಥಾಪಕರು “ಅಯೋಧ್ಯೆ ಭಾರತದ ಅತಿದೊಡ್ಡ ಪ್ರವಾಸಿ ಸ್ಥಳವಾಗಲಿದೆ” ಮತ್ತು ವಾರಾಣಾಸಿ ಅಸಾಧಾರಣವಾಗಿ ಉತ್ತಮವಾದ ಪ್ರವಾಸಿ ಸ್ಥಳವಾಗಿದೆ ಎಂದು ಮತ್ತೊಬ್ಬ ಬಳಕೆದಾರರು ಕೇಳಿದಾಗ ಉತ್ತರಿಸಿದ್ದಾರೆ. ಬಳಕೆದಾರರು ಅಯೋಧ್ಯೆಗೆ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು?” ಕಳೆದ 3 ವರ್ಷಗಳಲ್ಲಿ ವಾರಾಣಾಸಿಗೆ ಪ್ರವಾಸಿಗರ ಒಳಹರಿವು ಏನಾಯಿತು.. ಎಂದು ಪ್ರಶ್ನಿಸಿದ್ದರು.

ಮತ್ತೊಂದು ಪೋಸ್ಟ್‌ನಲ್ಲಿ, ಅಗರ್ವಾಲ್ ಅವರು ಗೋವಾ, ಅಯೋಧ್ಯೆ ಮತ್ತು ನೈನಿತಾಲ್ ಅನ್ನು ಹೋಲಿಸಿ ಹೆಚ್ಚಿನ ಡೇಟಾವನ್ನು ಹಂಚಿಕೊಂಡಿದ್ದಾರೆ. “ನೈನಿತಾಲ್‌ನಲ್ಲಿ ಶೇಕಡಾ 60 ಮತ್ತು ಗೋವಾದಲ್ಲಿ ಶೇಕಡಾ 50 ಕ್ಕೆ ಹೋಲಿಸಿದರೆ OYO ಅಪ್ಲಿಕೇಶನ್ ಬಳಕೆದಾರರಲ್ಲಿ ಅಯೋಧ್ಯೆ ಶೇಕಡಾ 70 ರಷ್ಟು ಜಿಗಿತವನ್ನು ಕಂಡಿದೆ. “ಪವಿತ್ರ ಸ್ಥಳಗಳು ಈಗ ಭಾರತದ ನೆಚ್ಚಿನ ತಾಣಗಳಾಗಿವೆ ” ಎಂದು ಅಗರ್ವಾಲ್ ಹೇಳಿದ್ದಾರೆ.

ಧಾರ್ಮಿಕ ಪ್ರವಾಸೋದ್ಯಮವು ಮುಂದಿನ 5 ವರ್ಷಗಳಲ್ಲಿ ಪ್ರವಾಸೋದ್ಯಮದ ಅತಿದೊಡ್ಡ ಬೆಳವಣಿಗೆಯ ಚಾಲಕಗಳಲ್ಲಿ ಒಂದಾಗಿದೆ,” ಎಂದು ಅವರು ಹೇಳಿದರು.
ಆರು ವಂದೇ ಭಾರತ ಮತ್ತು ಎರಡು ಹೊಸ ಅಮೃತ ಭಾರತ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಅಮೃತ ಭಾರತ ರೈಲುಗಳು, ಸೂಪರ್‌ಫಾಸ್ಟ್ ಪ್ಯಾಸೆಂಜರ್ ರೈಲುಗಳ ಹೊಸ ವರ್ಗವಾಗಿದ್ದು, ‘ಪುಶ್-ಪುಲ್’ ತಂತ್ರಜ್ಞಾನವನ್ನು ಒಳಗೊಂಡಿವೆ, ಇದು ಅವುಗಳ ವೇಗವನ್ನು ಮತ್ತು ಪ್ರಯಾಣಿಕರ ಸೌಕರ್ಯವನ್ನು ಹೆಚ್ಚಿಸುತ್ತದೆ.
ಪ್ರಧಾನಿ ಮೋದಿ ಅವರು ಫ್ಲ್ಯಾಗ್ ಆಫ್ ಮಾಡಿದ ವಂದೇ ಭಾರತ ರೈಲುಗಳು ಜನವರಿ 4 ರಂದು ಕಾರ್ಯಾಚರಣೆಯನ್ನು ಪ್ರಾರಂಭಿಸಲಿವೆ. ಅಯೋಧ್ಯೆಯಿಂದ ದೆಹಲಿಯ ಆನಂದ ವಿಹಾರ ನಿಲ್ದಾಣಕ್ಕೆ ರೈಲು ವಾರದಲ್ಲಿ ಆರು ದಿನಗಳು ಚಲಿಸುತ್ತದೆ ಮತ್ತು ಉತ್ತರ ಪ್ರದೇಶದ ರಾಜಧಾನಿ ಲಕ್ನೋ, ಕಾನ್ಪುರವನ್ನು ಸಹ ಒಳಗೊಂಡಿದೆ. ಮೂರು ವಂದೇ ಭಾರತ ರೈಲುಗಳು ಉತ್ತರ ಪ್ರದೇಶದಲ್ಲಿ ಸಂಚರಿಸುತ್ತವೆ. ಗೋರಖಪುರ-ಲಕ್ನೋ ಮತ್ತು ನವದೆಹಲಿ-ವಾರಾಣಸಿ ಇತರ ಎರಡು ರೈಲುಗಳಾಗಿವೆ.

ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಾ ಧಾಮ ಎಂದು ಕರೆಯಲ್ಪಡುವ ಅಯೋಧ್ಯೆ ವಿಮಾನ ನಿಲ್ದಾಣವನ್ನು ₹ 1,450 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್ 6,500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ ಮತ್ತು ವಾರ್ಷಿಕವಾಗಿ ಸುಮಾರು 10 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಸಜ್ಜುಗೊಳಿಸಲಾಗುತ್ತಿದೆ.
ಮಹಾಮಸ್ತಕಾಭಿಷೇಕದ ನಂತರ ಪ್ರತಿದಿನ ರಾಮಮಂದಿರಕ್ಕೆ ಭೇಟಿ ನೀಡುವ ನಿರೀಕ್ಷೆಯಿರುವ ಸಾವಿರಾರು ಜನರಿಗೆ ಸೇವೆ ಒದಗಿಸಲು ಏರ್‌ಲೈನ್ಸ್ ದೆಹಲಿ, ಮುಂಬೈ, ಕೋಲ್ಕತ್ತಾ, ಹೈದರಾಬಾದ್, ಬೆಂಗಳೂರು, ಚೆನ್ನೈ ಮತ್ತು ಅಹಮದಾಬಾದ್‌ನಂತಹ ಪ್ರಮುಖ ನಗರಗಳಿಗೆ ಮತ್ತು ಅಲ್ಲಿಂದ ಅಯೋಧ್ಯೆಗೆ ವಿಮಾನ ಸೇವೆಗಳನ್ನು ಒದಗಿಸುತ್ತವೆ.