ಬೆಳಗಾವಿ :
ತನ್ಮಯ ಚಿಂತನ ಚಾವಡಿ ವತಿಯಿಂದ ಮಹೇಶ ಪಿಯು ಕಾಲೇಜ್ ಮಹಾಂತೇಶ ನಗರ ದಲ್ಲಿ ದಿ 08.01.2024 ರಂದು ಡಾ. ಜಯಾನಂದ ಧನವಂತ ಅವರ ಕವನ ಸಂಕಲನವನ್ನು ನಿವೃತ್ತ ಪ್ರಾಚಾರ್ಯ ಎಸ್. ಆರ್. ಹಿರೇಮಠ ಬಿಡುಗಡೆ ಮಾಡಿದರು.

ಧನವಂತ ಅವರ ಬಾಳಿನಲ್ಲಿ ಅನುಭವದ ಕವನಗಳು ಮೂಡಿ ಬಂದಿವೆ. ಇವರಿಂದ ಇನ್ನೂ ಕೃತಿಗಳು ಬರಲಿ ಎಂದು ಹಾರೈಸಿದರು. ಪ್ರಾಚಾರ್ಯ ಮಂಜುನಾಥ ಭಟ್ ಕವನ ಸಂಕಲನ ಪರಿಚಯ ಮಾಡಿದರು. 201 ಕವನಗಳು ವಸ್ತು ವಿನ್ಯಾಸ, ಪದ ಬಳಕೆ .ಅಭಿವ್ಯಕ್ತಿಯ ರಸಭರಿತ ಪ್ರೇಮ ಕವನಗಳು,ಪರಿಸರ, ಶಿಕ್ಷಣ, ಕೊರೋನಾ.ಪಶು ಪಕ್ಷಿ, ಕೋವಿಡ್, ಹಬ್ಬಗಳು ಮುಂತಾದವುಗಳನ್ನು ಒಳಗೊಂಡಿವೆ. ವೃತ್ತಿಯಿಂದ ವೈದ್ಯರಾದರೂ ಪ್ರವೃತ್ತಿಯಿಂದ ಕವಿಗಳು ಉತ್ತಮ ರೀತಿಯಲ್ಲಿ ಕವನ ಮೂಡಿ ಬಂದಿವೆ ಎಂದರು. ಮೃತ್ಯುಂಜಯಸ್ವಾಮಿಗಳು ಹಿರೇಮಠ ಸಾನ್ನಿಧ್ಯ ವಹಿಸಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಸ ರಾ ಸುಳಕೂಡೆ ಅವರು ತನ್ಮಯ ಚಿಂತನ ಚಾವಡಿ ಕಾಯ೯ಗಳು ಹಾಗೂ ಡಾ ಜಯಾನಂದ ಧನವಂತರಿಂದ ಉತ್ತರೋತ್ತರವಾಗಿ ಕವನ ಸಂಕಲನಗಳು ಸಾರಸ್ವತ ಲೋಕಕ್ಕೆ ನೀಡಲೆಂದು ಹಾರೈಸಿದರು. ನಿವೃತ್ತ ನ್ಯಾಯಾಧೀಶ ಯಗೇಶ ಕರಗುದ್ರಿ ಮಾತನಾಡಿದರು. ಹಸಿರು ಕ್ರಾಂತಿ ದಿನಪತ್ರಿಕೆ ಸಂಪಾದಕ ವಿಜಯ ಮುಚಳಂಬಿ, ಬೆಳಗಾವಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಹಂಜಿ ಉಪಸ್ಥಿತರಿದ್ದರು. ರಶ್ಮಿ ಧನವಂತ ಪ್ರಕಾಶಕರು ಅನುಭಾವನಾ ಪ್ರಕಾಶನ ರಾಮತಿಥ೯ನಗರ, ಎಫ್ .ವೈ. ತಳವಾರ, ಬಿ.ಬಿ. ಮಠಪತಿ, ಎಸ್. ಎಸ್. ತಲ್ಲೂರ, ಶಿವಾನಂದ ತಲ್ಲೂರ, ಅಶೋಕ ಉಳಾಗಡ್ಡಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಜಗದೀಶ, ಶಂಕರ, ಪ್ರವೀಣ, ವಾಣಿ, ಸಿದ್ದವ್ವ, ಶಕುಂತಲಾ, ಸವಿತಾ, ಜಗದೀಶ ಬಾಗನವರ, ಸಿ.ಕೆ. ಕಟಾಪುರಿಮಠ, ಬಿ.ಬಿ.ಕಮತೆ ಪಾಲ್ಗೊಂಡಿದ್ದರು. ಎಂ.ವೈ. ಮೆಣಸಿನಕಾಯಿ ನಿರೂಪಿಸಿದರು. ಬಾಳಗೌಡ ದೊಡಬಂಗಿ ವಂದಿಸಿದರು.