ದೆಹಲಿ :
ಎಪ್ರಿಲ್ 19 ರ ಬೆಳಗ್ಗೆ 7 ಗಂಟೆಯಿಂದ ಜೂನ್ 1 ಸಂಜೆ 6:30 ವರೆಗೆ ಲೋಕಸಭಾ ಚುನಾವಣೆ ಹಾಗೂ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯ ಚುನಾವಣಾ ಸಮೀಕ್ಷೆ ನಡೆಸುವುದು ಮತ್ತು ಪ್ರಕಟಿಸುವುದಕ್ಕೆ ಚುನಾವಣಾ ಆಯೋಗ ಇದೀಗ ನಿರ್ಬಂಧ ಹೇರಿದೆ. ಈ ಬಗ್ಗೆ ಗುರುವಾರ ಪ್ರಕಟಣೆ ಹೊರಡಿಸಿದೆ. ಅಭಿಪ್ರಾಯ ಸಂಗ್ರಹ ಅಥವಾ ಸಮೀಕ್ಷೆಯ ಫಲಿತಾಂಶ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಯಾವುದೇ ವಿಚಾರವನ್ನು ನಿಗದಿಯಂತೆ ಚುನಾವಣೆ ಮುಗಿಯುವವರೆಗೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದನ್ನು ಜನಪ್ರತಿನಿಧಿಗಳ ಕಾಯ್ದೆ ಅನುಸಾರ ನಿರ್ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.