ಬೆಂಗಳೂರು :
ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಇರಬೇಕು ಎಂಬ ತವಕದಲ್ಲಿರುವ ಬಿಜೆಪಿ ಈ ಬಾರಿ ಟಿಕೆಟ್ ನೀಡುವಲ್ಲಿ ಮಹತ್ವದ ಅಂಶಗಳನ್ನು ಪರಿಗಣಿಸಿದೆ. ಹೀಗಾಗಿ ನಾನಾ ಕಾರಣಗಳಿಂದ ಕೆಲವು ಹಾಲಿ ಸಂಸದರಿಗೆ ಟಿಕೆಟ್ ನೀಡಿಲ್ಲ.

ರಾಜ್ಯದ 25 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಸಿದೆ. ಈ ಪೈಕಿ 12 ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪಿದೆ. ಅನಂತ್ ಕುಮಾ‌ರ್ ಹೆಗಡೆ, ಪ್ರತಾಪ್ ಸಿಂಹ, ನಳೀನ್ ಕುಮಾರ್ ಕಟೀಲ್‌, ಮಂಗಳಾ ಅಂಗಡಿ, ನಾರಾಯಣ ಸ್ವಾಮಿ, ಕರಡಿ ಸಂಗಣ್ಣ, ಸದಾನಂದ ಗೌಡ ಹಾಗೂ ದೇವೆಂದ್ರಪ್ಪಗೆ ಟಿಕೆಟ್ ಮಿಸ್ ಆಗಿದೆ. ಹಾಗೇ, ಬಚ್ಚೇಗೌಡ, ಜಿ,ಎಸ್. ಬಸವರಾಜ್, ಶ್ರೀನಿವಾಸ್‌ ಪ್ರಸಾದ್ ಹಾಗೂ ಶಿವಕುಮಾರ್ ಉದಾಸಿ ಅವರು ಅಭ್ಯರ್ಥಿ ಘೋಷಣೆಗೂ ಮುನ್ನವೇ ಚುನಾವಣೆಯಿಂದ ಹಿಂದೆ ಸರಿದಿದ್ದರು.