ಬೆಳಗಾವಿ : ಕೆಎಲ್ಇ ಸಂಸ್ಥೆಯ ಬಿ. ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದ ವತಿಯಿಂದ ಎನ್.ಎಸ್.ಎಸ್. ವಿಶೇಷ ಶಿಬಿರದಡಿ ಹಿಂಡಲಗಾ ಗ್ರಾಮ ಪಂಚಾಯತ್ ನಲ್ಲಿ ಡೆಂಗ್ಯೂ ನಿವಾರಣೆಗೆ ಉಚಿತವಾಗಿ ಹೋಮಿಯೋಪತಿ ಔಷಧವನ್ನು ಸೋಮವಾರ ವಿತರಿಸಲಾಯಿತು.

ಕೆಎಲ್ಇ ಸಂಸ್ಥೆಯ ಹೋಮಿಯೋಪತಿ ವಿದ್ಯಾಲಯದ ತಜ್ಞ ವೈದ್ಯರು ಸಿದ್ಧಪಡಿಸಿದ ಡೆಂಗ್ಯೂ ನಿವಾರಣೆ ಔಷಧಿಯಿಂದ ಸುಮಾರು 1000 ಗ್ರಾಮಸ್ಥರು ಪ್ರಯೋಜನ ಪಡೆದುಕೊಂಡರು. ಹಿಂಡಲಗಾ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಬೆಳಗಾವಿಯ ಬೆಲ್ಲದ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.