ಬೆಳಗಾವಿ :
ನಗರದ ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ದಿನಾಂಕ 24/11 /2023 ಅಂತರ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಸ್ತು ಪ್ರದರ್ಶನ ಮತ್ತು ವಿವಿಧ ಸ್ಪರ್ಧೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ಪಾರಿತೋಷಕ ವಿತರಣಾ ಕಾರ್ಯಕ್ರಮ ಜರುಗಿತು.

ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಬೇಕು. ಬದ್ದತೆಯಿಂದ ಕಾರ್ಯನಿರ್ವಹಿಸಿದರೆ ಯಶಸ್ಸು ಸಿಗುತ್ತದೆ. ಅತ್ಯುತ್ತಮ ಸಾಧನೆ ಮಾಡಿ ಸಾಧಕರಾಗಬೇಕು. ಪಿಯುಸಿ ಹಂತ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಮಹತ್ವದ ಘಟ್ಟವಾಗಿದ್ದು ಪಿಯುಸಿ ಹಂತದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಆರ್ ಎಲ್ ಎಸ್ ಕಾಲೇಜಿನ ಪ್ರಾಚಾರ್ಯೆ ಡಾ.ಜೆ.ಎಸ್. ಕವಳೇಕರ, ಪದವಿಪೂರ್ವ ಉಪ ಪ್ರಾಚಾರ್ಯ ಡಾ ಸಂದೀಪ ಜವಳಿ, ಕೆ ಎಲ್ ಇ ಸಂಸ್ಥೆಯ ಆಜೀವ ಸದಸ್ಯ ಎಸ್.ಜಿ.ನಂಜಪ್ಪನವರ ಹಾಗೂ ಡಾ.ಸತೀಶ ಎಂ.ಪಿ. ಉಪಸ್ಥಿತರಿದ್ದರು

ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಿಶ್ವನಾಥ ಕಾಮಗೋಳ ಸ್ವಾಗತಿಸಿದರು. ಸದಾನಂದ ಢವಳೇಶ್ವರ ವಂದಿಸಿದರು. ಇಲ್ಕಾ ಅಹಮ್ಮದಿ ಮಹಮ್ಮದ ಸಾಥ,ರಿಯಾ ಮುಚ್ಚಂಡಿಕರ ಅನಿಸಿಕೆ ವ್ಯಕ್ತಪಡಿಸಿದರು. ಎಸ್.ಬಿ.ಬನ್ನಿಮಟ್ಟಿ ನಿರೂಪಿಸಿದರು.
ಜಿಲ್ಲೆಯ 41 ಪ್ರೌಢಶಾಲೆಗಳ 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು, 107 ಆಕೃತಿ ಪ್ರದರ್ಶನ ಮಾಡಿದರು.

ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು