ಬೆಳಗಾವಿ : ರಾಜ್ಯದ ವಿವಿಧಡೆ ಲೋಕಾಯುಕ್ತ ದಾಳಿ ನಡೆದಿದ್ದು ಬೆಳಗಾವಿಯಲ್ಲಿ ಸಹಾ ಇಬ್ಬರು ಅಧಿಕಾರಿಗಳ ಮನೆ ಮೇಲೆ ದಾಳಿ ನಡೆದಿದೆ.ಖಾನಾಪುರದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ದುರದುಂಡೇಶ್ವರ ಮಹದೇವ ಬನ್ನೂರ ಅವರ ಎರಡು ಮನೆಗಳ ಮೇಲೆ ದಾಳಿ ನಡೆದಿದೆ. ಯಳ್ಳೂರು ಹಾಗೂ ವಿಜಯನಗರದ ಮನೆಗಳ ಮೇಲೆ ದಾಳಿ ನಡೆದಿದ್ದು ಶೋಧಕಾರ್ಯ ನಡೆದಿದೆ.ಬೆಳಗಾವಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶೇಖರಗೌಡ ಕುರಡಗಿ ಅವರ ಬೆಳಗಾವಿ ವಿದ್ಯಾನಗರ ಒಂದನೇ ಕ್ರಾಸ್ ನಲ್ಲಿರುವ ಅವರ ಮನೆ ಹಾಗೂ ಗಣೇಶಪುರದಲ್ಲಿರುವ ಕಚೇರಿಯಲ್ಲಿ ಲೋಕಾಯುಕ್ತರು ಶೋಧ ಕಾರ್ಯ ನಡೆಸಿದ್ದಾರೆ.