ಬೆಳಗಾವಿ :
ಉತ್ತರ ಕರ್ನಾಟಕ ಅಧಿವಕ್ತ ಪರಿಷತ್ತಿನ ಸಹಯೋಗದಲ್ಲಿ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯವು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ 1973, ಭಾರತೀಯ ನಾಗರಿಕ ಸಂರಕ್ಷಣ ಸಂಹಿತೆ-2023 (ಹೋಲಿಕೆ, ಸಲಹೆ ಮತ್ತು ಪರಿಹಾರ ಕುರಿತು) ಒಂದು ದಿನದ ಸಂವಾದ ಕಾರ್ಯಕ್ರಮವನ್ನು ರವಿವಾರ ನಗರದ ಆರ್ .ಎಲ್.ವಿಜ್ಞಾನ ಮಹಾವಿದ್ಯಾಲಯದ ಸರ್ ಸಿ.ವಿ.ರಾಮನ್ ಸಭಾಗೃಹದಲ್ಲಿ
ಆಯೋಜಿಸಿತ್ತು.

ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ವಿಭಾಗ ಮಟ್ಟದ ಈ ಕಾರ್ಯಕ್ರಮವನ್ನು ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ
ಪ್ರಾಚಾರ್ಯ ಬಿ.ಜಯಸಿಂಹ ಉದ್ಘಾಟಿಸಿದರು.

ನ್ಯಾಯವಾದಿ ಪ್ರಶಾಂತಗೌಡರ ಮತ್ತು ಎಂ.ಎನ್. ಲಕ್ಷೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಎಲ್.ಎನ್.ಹೆಗಡೆ ಅವರು ರಾಷ್ಟ್ರ ನಿರ್ಮಾಣದಲ್ಲಿ ವಕೀಲರು ಮತ್ತು ಕಾನೂನು ವಿದ್ಯಾರ್ಥಿಗಳ ಪಾತ್ರವನ್ನು ಒತ್ತಿ ಹೇಳಿದರು.
ಸಚಿನ್ ಶಿವಣ್ಣನವರ ವಂದಿಸಿದರು.
200 ಕ್ಕೂ ಹೆಚ್ಚು ವಕೀಲರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
B V Law College in in Association with adivakta adhivakta Parishad Karnataka north organised one day workshop on Criminal Procedure Code 1973 and Bharatiya nagrikka sauraksha Samita 2023 principal B Jayasimha inaugurated the function advocate Prashant Gowda and MN Lakshetti were the resource person
Shri LN Hegde in validity emphasised the role of advocates and law students in nation building
Shri Sachin shivannavar proposed vote of thanks
More than 200 advocates and students particlpatef