ರಾಯಬಾಗ :
ದೇಶದ ಮಾಜಿ ಉಪ ಪ್ರಧಾನಿ ಮತ್ತು ಬಿಜೆಪಿಯ ಹಿರಿಯ ಮುತ್ಸದ್ದಿ ಎಲ್ .ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆ ಮಾಡಿರುವುದು ಅಭಿನಂದನೀಯ ಎಂದು ಬಿಜೆಪಿ ಧುರೀಣ ರಾಜು ಕಿರಣಗಿ
ಹೇಳಿದರು.

96 ವರ್ಷದ ಎಲ್.ಕೆ. ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ಮುತ್ಸದ್ದಿಗೆ ಅತ್ಯಂತ ದೊಡ್ಡ ಗೌರವ ನೀಡಿದ್ದಾರೆ. ಬಿಜೆಪಿ ಕಟ್ಟುವಲ್ಲಿ ಮಹಾನ್ ಕೊಡುಗೆ ನೀಡಿದ ಅಡ್ವಾಣಿ ಅವರು ಉಪ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರಾಗಿ ದೇಶಕ್ಕೆ ಅನುಪಮ ಕೊಡುಗೆ ನೀಡಿರುವುದನ್ನು ಗಮನಿಸಿ ಕೇಂದ್ರ ಸರಕಾರ ಭಾರತ ರತ್ನ ಘೋಷಿಸಿರುವುದು ಅತ್ಯಂತ ಸ್ತುತ್ಯರ್ಹ ಎಂದು ಅವರು ತಿಳಿಸಿದ್ದಾರೆ.