ಗೋಳಿಯಂಗಡಿ ಸಮೀಪದ ಹಿಲಿಯಾಣ ಭಟ್ರಾಡಿ
ಶ್ರೀಮಹಿಷಮರ್ಧಿನಿ (ದುರ್ಗಾದೇವಿ) ದೇವಳದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮೇ 8 ನೇ ಬುಧವಾರ ನಡೆಯಲಿದೆ. ಬೆಳಿಗ್ಗೆ ಗಂ 9 ರಿಂದ ನವಕ ಪ್ರಧಾನ ಅಧಿವಾಸ ಹೋಮ,ಕಲಶಾಭಿಷೇಕ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಮಧ್ಯಾಹ್ನ ಶೈಲಜಾ ತಾರಾನಾಥ ಶೆಟ್ಟಿ, ಪಲ್ಲವಿ ರಶ್ವತ್ಕುಮಾರ ಶೆಟ್ಟಿ ಇವರಿಂದ ಅನ್ನ ಸಂತರ್ಪಣೆ ಸೇವೆ,ರಾತ್ರಿ ಗಂ 7 ಕ್ಕೆ ರಂಗ ಪೂಜೆ,ಪಲ್ಲಕ್ಕಿ ಉತ್ಸವ ನಡೆಯಲಿದೆ.