ಬೆಳಗಾವಿ: ಬೆಳಗಾವಿ ಟಿಳಕ ಚೌಕದಲ್ಲಿ ಯುವಕನೊಬ್ಬ ಶುಕ್ರವಾರ ವಿದ್ಯುತ್ ಕಂಬದ ಟಿಸಿ ಏರಿ ಹಾಡು ಹೇಳತೊಡಗಿದ. ಇದರಿಂದ ಅಲ್ಲಿನ ನಾಗರಿಕರು ಆತಂಕಕ್ಕೊಳಗಾದರು.

ಯುವಕನನ್ನು ಟಿಸಿಯಿಂದ ಕೆಳಗಿಳಿಸಲು ಸೇರಿದ್ದ ಜನ
ಹರಸಾಹಸ ಪಡಬೇಕಾಯಿತು. ಇದರಿಂದ ಟಿಳಕಚೌಕ್ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಕೊನೆಗೂ ನಾಗರಿಕರ ಶತಪ್ರಯತ್ನದ ಬಳಿಕ ಆತನನ್ನು ಮನವೊಲಿಸಿ ಕೆಳಗಿಳಿಸಲಾಯಿತು.