ಬೆಳಗಾವಿ :ರಾತ್ರಿ ಹೊತ್ತು ಕತ್ತಲಲ್ಲಿ ವೇಗವಾಗಿ ಬಂದ ದ್ವಿಚಕ್ರ ವಾಹನವೊಂದು ನಿಯಂತ್ರಣ ತಪ್ಪಿ ಖಾಸಗಿ ಲೇ ಔಟ್ ಚರಂಡಿಗೆ ಬಿದ್ದ ಘಟನೆ ಬೆಳಗ್ಗೆ ಬೆಳಕಿಗೆ ಬಂದಿದೆ.

ಘಟನೆಯಲ್ಲಿ ಶ್ಯಾಮ್ ನಾಗಪ್ಪ ಕೇದಾರ(47ವರ್ಷ) ಮೃತಪಟ್ಟಿದ್ದಾರೆ. ಇವರು ಮುತಗಾ ವೆಂಕಟೇಶ ನಗರದ ನಿವಾಸಿ. ರವಿವಾರ ರಾತ್ರಿ ಮುತಗಾ ರಸ್ತೆಯಿಂದ ಬಸರಿಕಟ್ಟಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು.
ಕತ್ತಲಲ್ಲಿ ವೇಗವಾಗಿ ಬಂದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಬಡಾವಣೆಯ ಚರಂಡಿಗೆ ಬಿದ್ದಿದ್ದು, ಶಾಮ್ ತಲೆಗೆ ಗಂಭೀರ ಗಾಯವಾಗಿ ಮೃತಪಟ್ಟಿದ್ದು, ರಾತ್ರಿ 11 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಆದರೆ ಆ ರಸ್ತೆಯಲ್ಲಿ ಯಾರೂ ಇದನ್ನು ಗಮನಿಸದ ಕಾರಣ ಸೋಮವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.
ಮಾರಿಹಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.