ದೆಹಲಿ : ಲೋಕಸಭಾ ಚುನಾವಣೆಗೆ ಸಂಬಂಧಿಸಿ ಕೇವಲ ಮೂರು ಅಭ್ಯರ್ಥಿಗಳ ಹೆಸರು ಇರುವ ಮತ್ತೊಂದು ಪಟ್ಟಿಯನ್ನು ಬಿಜೆಪಿ ಮಂಗಳವಾರ ಬಿಡುಗಡೆ ಮಾಡಿದೆ. ರಾಜಸ್ಥಾನ ಮತ್ತು ಮಣಿಪುರದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಲಾಗಿದೆ. ರಾಜಸ್ಥಾನದ ದೌಸಾ ಕ್ಷೇತ್ರದಿಂದ ಕನ್ನಯ್ಯ ಲಾಲ್ ಮೀನಾ, ಕರೌಲಿ-ಧೋಲ್ಪುರ್ ಕ್ಷೇತ್ರದಿಂದ ಇಂದೂ ದೇವಿ ಜಾಟವ್ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಮಣಿಪುರದ ಇನ್ನರ್ ಲೋಕಸಭಾ ಕ್ಷೇತ್ರದಿಂದ ಥೌನೋಜಮ್ ಬಸಂತ್ ಕುಮಾರ್ ಸಿಂಗ್ ಅವರ ಹೆಸರನ್ನು ಪ್ರಕಟಿಸಿದೆ.