ಬೆಳಗಾವಿ : ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾ ವತಿಯಿಂದ ಬೆಳಗಾವಿ ನಗರದ ರಾಣಿ ಚೆನ್ನಮ್ಮ ಸರ್ಕಲ್ ದಿಂದ ಪ್ರತಿಭಟನೆ ಮುಖಾಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ನೀಡಲಾಯಿತು.

ಕರ್ನಾಟಕ ರಾಜ್ಯ ಸರ್ಕಾರದಿಂದ ರಚನೆ ಆಗಿರುವ ರೈತ ಉತ್ಪಾದಕರ ಸಂಸ್ಥೆಗಳಿಗೆ ಬಾಕಿ ಹಣ ಬಿಡುಗಡೆ ಮಾಡುವ ಬಗ್ಗೆ ಬೇಡಿಕೆ ಇಡಲಾಯಿತು.

ಭಾರತದಲ್ಲಿ ಮೊದಲ ಬಾರಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ 2015 ರಲ್ಲಿ ದೇಶದ ರೈತರಿಗಾಗಿ ಕಲ್ಪನೆಗೊಂಡ ಪ್ರತಿಷ್ಠಿತ
ಯೋಜನೆ ರೈತ ಉತ್ಪಾದಕರ ಸಂಸ್ಥೆಗಳನ್ನು (ಎಫ್. ಪಿ. ಒ) ಉತ್ತೇಜನ ನೀಡಲಾಗಿದೆ. ರೈತರಿಂದ ರೈತರಿಗೆ ರೈತರಿಗೋಸ್ಕರ ರಚನೆಗೊಂಡ ರೈತ ಉತ್ಪಾದಕ ಸಂಸ್ಥೆಗಳು ಕಂಪನಿಗಳ ಕಾಯ್
1956 ಅಡಿ ಪರಿಚ್ಛೇದ IX A ಗೆ 2013 ರಲ್ಲಿ ತಿದ್ದುಪಡಿಯಾದ ಕಂಪನಿ ಕಾಯ್ದೆ ಅಡಿಯಲ್ಲಿ
ಕಾರ್ಪೊರೇಟ್ ಸಚಿವಾಲಯ, ಭಾರತ ಸರಕಾರಿರಲ್ಲಿ ನೋಂದಾಯಿಸಲಾಗುತ್ತದೆ.ರೈತರನ್ನು ಒಟ್ಟಾಗಿಸಲು ರೈತ ಉತ್ಪಾದಕರ ಸಂಸ್ಥೆಗಳು ಅತ್ಯಂತ ಪರಿಣಾಮಕಾರಿ ಸಾಂಸ್ಥಿಕ ಸಂಸ್ಥೆಗಳಾಗಿವೆ.

ಈ ಸಂಸ್ಥೆಗಳು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಾದ ಸಂಸ್ಕರಣೆ, ಮೌಲ್ಯವರ್ಧನೆ,
ಸಂಗ್ರಹಣೆ, ಮಾರಾಟ, ಹಣಕಾಸಿನ ಸೇವೆ, ಪರಿಕರಗಳ ಪೂರೈಕೆ, ಬಿತ್ತನೆ ಬೀಜ ಉತ್ಪಾದನೆ ಮುಂತಾದ ವಿಭಿನ್ನ ಚಟುವಟಿಕೆಗಳನ್ನು ಒಟ್ಟಾಗಿ ತೆಗೆದುಕೊಳ್ಳಲು ರೈತ ಉತ್ಪಾದಕ ಸಂಸ್ಥೆಗಳು
ರೈತರನ್ನು ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಿ,ಅವರ ಆದಾಯವನ್ನು ದ್ವಿಗುಣಗೊಳಿಸಬಹುದಾದ ಉತ್ತಮ ಸಾಂಸ್ಥಿಕ ಮಾದರಿಗಳಾಗಿವೆ. ತಾಂತ್ರಿಕ ಮಾಹಿತಿ ಮತ್ತು ಆಧುನಿಕ
ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳಲು ಮಾರ್ಗದರ್ಶನ. ಅವಶ್ಯವಿರುವ ಪರಿಕರಗಳನ್ನು ಸರಿಯಾದ ವೇಳೆಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಸರಬರಾಜು. ಉತ್ಪನ್ನಗಳನ್ನು ಕ್ರೋಢೀಕರಿಸಿ, ಮೌಲ್ಯವರ್ಧನೆ ಮಾಡಿ ಮಧ್ಯವರ್ತಿಗಳನ್ನು ತಪ್ಪಿಸಿ ಲಾಭದಾಯಕ ಬೆಳೆಗೆ ನೇರ ಮಾರಾಟ ಮಾಡಬೇಕು.

ಕಂಪನಿಯೊಂದಿಗೆ ವ್ಯವಹರಿಸಿದ ಮೊತ್ತಕ್ಕೆ ಅನುಗುಣವಾಗಿ ವಾರ್ಷಿಕ ಸಭೆಯಲ್ಲಿ
ತೀರ್ಮಾನಿಸಿದಂತೆ ಷೇರುದಾರರಿಗೆ/ಸದಸ್ಯರಿಗೆ ಪ್ರೋತ್ಸಾಹಕ ಮತ್ತು ಸಾಮಾನ್ಯ ಲಾಭಾಂಶದ ಹಂಚಿಕೆ, ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ರೈತ ಉತ್ಪಾದಕರ ಕಂಪನಿಯ ಮುಖಾಂತರ ಪಡೆಯಲು ಹೆಚ್ಚಿನ ಅವಕಾಶ, ಸಕಾಲದಲ್ಲಿ ಅದರಲ್ಲೂ ಮುಖ್ಯವಾಗಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಅಗತ್ಯ ಕೃಷಿ ಉಪಕರಣಗಳ ಸೇವೆ ವಿವಿಧ ಅಭಿವೃದ್ಧಿ ಇಲಾಖೆಗಳಲ್ಲಿ ರೈತ ಉತ್ಪಾದಕರ ಸಂಸ್ಥೆಗಳಿಗೆಂದೆ ಲಭ್ಯವಿರುವ ಆರ್ಥಿಕ ನೆರವನ್ನು ಪಡೆದು ಮೂಲಭೂತ ಸೌಕರ್ಯಗಳನ್ನು ರಚಿಸಿ ಅವುಗಳ ಸೇವೆಗಳನ್ನು ಸದಸ್ಯ ರೈತರಿಗೆ ಒದಗಿಸುವ ಉದ್ದೇಶವಾಗಿರುತ್ತದೆ.

2015-16 ರಿಂದ 2024 25ರವರೆಗೆ ನಬಾರ್ಡ್ ಪ್ರಾಯೋಜಿತ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಮತ್ತು ಪ್ರಧಾನಮಂತ್ರಿಗಳು 10,000 ರೈತ ಉತ್ಪಾದಕ ಯೋಜನೆಯ ಅಡಿಯಲ್ಲಿ ಒಟ್ಟು 3 ಯೋಜನೆಗಳಿಂದ 710 ರೈತ ಉತ್ಪಾದಕರ ಸಂಸ್ಥೆಗಳು ಪ್ರಾರಂಭವಾಗಿದ್ದು ಅಂದಾಜು ಅನುದಾನ 200 ಕೋಟಿ ರೂಪಾಯಿಗಳಲ್ಲಿ 182 ಬಿಡುಗಡೆಯಾಗಿದೆ ಆದರೆ ರಾಜ್ಯ ಸರ್ಕಾರದ ಸ್ವಾತಂತ್ರ ಅಮೃತ ಮಹೋತ್ಸವ ನೆನಪಿನ ಅಮೃತ ರೈತ ಉತ್ಪಾದಕರ ಸಂಸ್ಥೆಗಳ ಬಿಜೆಪಿ ಸರಕಾರದಲ್ಲಿ ಘೋಷಣೆಯಾಗಿದ್ದು 2021 -22 ರಿಂದ 2024 -25ರವರೆಗೆ 490 ರೈತ ಉತ್ಪಾದಕರ ಸಂಸ್ಥೆಗಳು ರಚನೆಯಾಗಿವೆ ಅಂದಾಜು ಅನುದಾನ 150 ಕೋಟಿ ರೂಪಾಯಿಗಳಿದ್ದು ಶೇಕಡ 12ರಷ್ಟು ಮಾತ್ರ ಅನುದಾನ ಬಿಡುಗಡೆಯಾಗಿದ್ದು ಶೇಕಡ 82ರಷ್ಟು ಬಾಕಿ ಶೇಕಡ 12ರಷ್ಟು ಅನುದಾನ ಕಳೆದ ಬಿಜೆಪಿ ಸರಕಾರದಲ್ಲಿ ಬಿಡುಗಡೆಯಾಗಿರುವ ಅನುದಾನ ಆಗಿದೆ. ಈಗಿನ ಕಾಂಗ್ರೆಸ್‌ ಸರ್ಕಾರ ಇದುವರೆಗೆ ಯಾವುದೇ ಅನುದಾನ ಬಿಡುಗಡೆ ಮಾಡದಿರುವುದರಿಂದ ರೈತ ಉತ್ಪಾದಕರ ಸಂಸ್ಥೆಗಳ ಅಭಿವೃದ್ಧಿ ಕುಂಠಿತವಾಗಿದೆ. ಇದರಿಂದ 10 ಲಕ್ಷ ರೈತರಿಗೆ ಮತ್ತು 12 ಸಾವಿರ ರೈತ ಉತ್ಪಾದಕ ಸಂಸ್ಥೆಗಳ ನಿರ್ದೇಶಕರಿಗೆ ತೊಂದರೆಗಳಾಗುತ್ತಿದೆ. ಆದಷ್ಟು ಬೇಗ ಬಾಕಿ ಇರುವ ಅನುದಾನವನ್ನು ರೈತ ಉತ್ಪಾದಕರ ಸಂಸ್ಥೆಗಳಿಗೆ ಬಿಡುಗಡೆ ಮಾಡಿ ಅವುಗಳ ಅಭಿವೃದ್ಧಿಗೆ ಸಹಾಯ ಮಾಡಬೇಕಾಗಿದೆ. ಅನುದಾನವನ್ನು ಶೀಘ್ರದಲ್ಲಿ ಬಿಡುಗಡೆ ಮಾಡದಿದ್ದರೆ ರೈತ ವಿರೋಧಿ ಕಾಂಗ್ರೆಸ್ ಸರಕಾರದ ನೀತಿಯ ಬಗ್ಗೆ ರಾಜ್ಯಾದ್ಯಂತ ಹೋರಾಟವನ್ನು ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ, ಮಹಾನಗರ ಜಿಲ್ಲಾ ಅಧ್ಯಕ್ಷೆ ಗೀತಾ ಸುತಾರ, ಮಾಜಿ ಶಾಸಕ ಸಂಜಯ ಪಾಟೀಲ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜಗದೀಶ ಬೂದಿಹಾಳ, ಸಂದೀಪ ದೇಶಪಾಂಡೆ, ರಮೇಶ ದೇಶಪಾಂಡೆ,ಉಜ್ವಲಾ ಬಡವನಾಚೆ, ಮುರಗೇಂದ್ರಗೌಡ ಪಾಟೀಲ,ಈರಯ್ಯ ಖೋತ, ರಾಜಶೇಖರ ಡೋಣಿ,ನಿತಿನ್ ಚೌಗಲೆ, ಸಚಿನ್ ಕಡಿ, ಬಾಳೇಶ್ ಚವ್ವನ್ನವರ್, ಸಂತೋಷ ಹಡಪದ, ಈರಣ್ಣ ವಾರದ, ಮಹೇಶ ಮೋಹಿತೆ ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.