ಹುಬ್ಭಳ್ಳಿ : ಮೃತ ಅಂಜಲಿ ಸಹೋದರಿ ದುಡುಕಿನ ನಿರ್ಧಾರವೊಂದನ್ನು ಕೈಗೊಂಡಿದ್ದಾಳೆ. ತಮ್ಮ ನಿವಾಸದಲ್ಲಿ ಅಂಜಲಿ ಸಹೋದರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಬರ್ಬರವಾಗಿ ಕೊಲೆಯಾಗಿದ್ದ ಅಂಜಲಿ ಅಂಬಿಗೇರ ಅವರ ಸಹೋದರಿ ಯಶೋದಾ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಕೆ ತೀವ್ರ ಅಸ್ವಸ್ಥಗೊಂಡಿದ್ದು, ಕಿಮ್ಸ್‌ಗೆ ಅಡ್ಮಿಟ್ ಮಾಡಲಾಗಿದೆ. ಇದೀಗ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತ್ಮಹತ್ಯೆ ಯತ್ನಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಅಕ್ಕನ ಕೊಲೆಯಾದ ಬಳಿಕ ಯಶೋದಾ ಬಹಳ ನೊಂದಿದ್ದು, ಆರೋಪಿಯನ್ನು ಶೂಟೌಟ್ ಮಾಡಿ ಸಾಯಿಸಬೇಕೆಂದು ಒತ್ತಾಯಿಸಿದ್ದಳು.

ಅಂಜಲಿ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆ ವೇಳೆಯೂ ಆಕೆಯ ಸಹೋದರಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಬಳಿಕ ಪ್ರತಿಭಟನೆ ಮುಗಿದು, ಮನೆಗೆ ಹೋದ ನಂತರ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ.