ಗೋಕಾಕ :
ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಜನಪ್ರತಿನಿಧಿಗಳ ಒಂದು ದಿನದ ವಿಶೇಷ ಪ್ರಶಿಕ್ಷಣ ವರ್ಗ
ನ. 27 ರಂದು ಗೋಕಾಕ ಸಪ್ಲಾಯರ್ ಸಭಾಭವನದಲ್ಲಿ ಜರುಗುಲಿದೆ ಎಂದು ವಿಭಾಗ ಪ್ರಶಿಕ್ಷಣ ಸಂಚಾಲಕ ಶಶಿಕಾಂತ ವಿಶ್ವ ಬ್ರಾಹ್ಮಣ ಹೇಳಿದರು

ಮಂಗಳವಾರದಂದು ಪಟ್ಟಣದ ಎನ್.ಎಸ್.ಎಫ್ ನಲ್ಲಿ ಜರುಗಿದ ಬೆಳಗಾವಿ ಗ್ರಾಮೀಣ ಚುನಾಯಿತ ಪ್ರತಿನಿಧಿಗಳ ಒಂದು ದಿನದ ಜಿಲ್ಲಾ ಪ್ರಶಿಕ್ಷಣ ವರ್ಗದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿ, ಈ ಪ್ರಶಿಕ್ಷಣ ವರ್ಗಕ್ಕೆ ಗೋಕಾಕ, ಮೂಡಲಗಿ, ಬೈಲಹೊಂಗಲ, ರಾಮದುರ್ಗ, ಸವದತ್ತಿ, ಕಿತ್ತೂರು ಹಾಗೂ ಖಾನಾಪುರ ತಾಲೂಕಿನ ಪುರಸಭೆ ಹಾಗೂ ಪಟ್ಟಣ ಪಂಚಾಯತಿಗೆ ಬಿಜೆಪಿಯಿಂದ ಚುನಾಯಿತರಾದ ಪ್ರತಿನಿಧಿಗಳಿಗಾಗಿ ಈ ಪ್ರಶಿಕ್ಷಣಾ ವರ್ಗ ಅತ್ಯಂತ ವಿಶಿಷ್ಟ ರೀತಿಯಲ್ಲಿ ಪ್ರವಾಸಿ ತಾಣ ಗೋಕಾಕ ಪಟ್ಟಣದಲ್ಲಿ ಆಯೋಜಿಸಲಾಗಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ ಪಾಟೀಲ ಮತ್ತು ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಈ ವರ್ಗ ಚುನಾಯಿತ ಪ್ರತಿನಿಧಿಗಳಿಗೆ ಮಾತ್ರ ಮೀಸಲಾಗಿದ್ದು, ಈ ಕಾರ್ಯಕ್ರಮದ ತಯಾರಿ ಭರದಿಂದ ಸಾಗಿದೆ. ಕಾರ್ಯಕ್ರಮದ ಕಾರ್ಯಾಲಯ, ಪ್ರಬಂಧಕರು, ಪ್ರಮುಖರು, ಅಪೇಕ್ಷಿತರ ಪಟ್ಟಿ ತಯಾರಿಕೆ, ನೋಂದಣಿ ಕಾರ್ಯ, ಸುಸಜ್ಜಿತ ವೇದಿಕೆ, ನಾಮ ಫಲಕ ಹಾಕುವುದು, ವಾಹನ ವ್ಯವಸ್ಥೆ, ಭೋಜನ ವ್ಯವಸ್ಥೆ ಆದಿಯಾಗಿ ಅನೇಕ ಜವಾಬ್ಧಾರಿಗಳನ್ನು ಅರಬಾವಿ ಮಂಡಲದ ಭಾಜಪ ಕಾರ್ಯಕರ್ತರು ನಿರ್ವಹಿಸಬೇಕು. ಈ ಕಾರ್ಯಕ್ರಮಕ್ಕೆ ಚುನಾಯಿತ ಬಿಜೆಪಿಯ ಜನಪ್ರತಿನಿಧಿಗಳು ಆಗಮಿಸುವುದರಿಂದ ಅಚ್ಚುಕಟ್ಟಾಗಿ ನಡೆಯಬೇಕೆಂದರು.

ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ನಿಡಲಾಯಿತು.
ಶಾಸಕರ ಆಪ್ತ ಕಾರ್ಯದರ್ಶಿ
ನಾಗಪ್ಪ ಶೇಖರಗೋಳ,
ಮಂಡಲ‌ ಅಧ್ಯಕ್ಷ ಮಹಾದೇವ ಶೆಕ್ಕಿ, ಜಿಲ್ಲಾ ಸೋಷಿಯಲ್ ಮೀಡಿಯಾ ಸಂಚಾಲಕ ನಿತೀನ್ ಚೌಗಲೆ, ಸಂತೋಷ ದೇಶನೂರ, ಮಹಾಂತೇಶ ಕುಡಚಿ, ಪರಸಪ್ಪ ಬಬಲಿ, ಸೇರಿದಂತೆ ಭಾಜಪ ವಿವಿಧ ಮೋರ್ಚಾ ಅಧ್ಯಕ್ಷರು, ಪ್ರಧಾನಕಾರ್ಯದರ್ಶಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.