ಬೆಳಗಾವಿ :
ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ವಿದ್ಯಾರ್ಥಿ ಫಕೀರಗೌಡ ಪಾಟೀಲ(ಬಿ ಎ ಅಂತಿಮ ವರ್ಷ) ಇತ್ತೀಚಿಗೆ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಭಾರ ಎತ್ತುವ ಸ್ಪರ್ಧೆಯ 81 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಬೆಸ್ಟ್ ಲಿಫ್ಟ್ ರ್ ಎಂಬ ಪ್ರಶಸ್ತಿ ಪಡೆಯುದರ ಮೂಲಕ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಯ ಈ ಸಾಧನೆಗೆ ಪ್ರಾ.ಡಾ. ಎಸ್ ಎಸ್ ತೇರದಾಳ, ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಬಸವರಾಜ ಕುಮಸಿ, ತರಬೇತುದಾರ ಸದಾನಂದ ( ಡಿವೈಇಸ್) ಹಾಗೂ ಎಲ್ಲ ಭೋಧಕ ಮತ್ತು ಭೋಧಕೇತರ ಸಿಬ್ಬಂದಿವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.