ನವದೆಹಲಿ :
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ರ ಮಧ್ಯಂತರ ಬಜೆಟ್ ಅನ್ನು ಗುರುವಾರ ಸಂಸತ್ತಿನಲ್ಲಿ ಮಂಡಿಸಿದ್ದಾರೆ.
ರೈತರು, ಮಹಿಳೆಯರು, ಯುವಕರು ಮತ್ತು ಬಡ ಜನಸಂಖ್ಯೆಯ ಸಬಲೀಕರಣದ ಮೇಲೆ ಪ್ರಮುಖ ಗಮನ ಹರಿಸಿದ್ದಾರೆ.
ಬಡವರು, ಮಹಿಳೆಯರು, ಯುವಕರು ಮತ್ತು ಅನ್ನದಾತರು ಎಂಬ ದೇಶದ 4 ಪ್ರಮುಖ ಆಧಾರಸ್ತಂಭಗಳ ಮೇಲೆ ನಾವು ಗಮನಹರಿಸಬೇಕಾಗಿದೆ ಎಂದು ಹಣಕಾಸು ಸಚಿವೆ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ಅರ್ಹರಿಗೂ ಸರ್ಕಾರದ ಯೋಜನಗಳು ಲಭ್ಯವಿದ್ದು, ಎಲ್ಲಾ ಅರ್ಹರಿಗೂ ಸಂಪನ್ಮೂಲಗಳನ್ನು ಪಾರದರ್ಶಕವಾಗಿ ವಿತರಿಸಲಾಗುತ್ತದೆ ಎಂದು ಹೇಳಿದ್ದಾರೆ.
ರೈತರ ಆದಾಯವನ್ನು ಹೆಚ್ಚಿಸುವುದು, ಮಹಿಳೆಯರನ್ನು ಸಬಲೀಕರಣಗೊಳಿಸುವುದು ಮತ್ತು ಯುವಕರಿಗೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು ಸರ್ಕಾರವು ಬಜೆಟ್ನಲ್ಲಿ ಗಮನಹರಿಸುತ್ತದೆ ಎಂದು ವ್ಯಾಪಕವಾಗಿ ನಿರೀಕ್ಷಿಸಲಾಗಿತ್ತು.
ನಿರ್ಮಲಾ ಸೀತಾರಾಮನ್ ಅವರ ಮಧ್ಯಂತರ ಬಜೆಟ್ ಮುಖ್ಯಾಂಶಗಳು…
ಆದಾಯ ತೆರಿಗೆ ಮಿತಿಯಲ್ಲಿ ಈ ವರ್ಷ ಯಾವುದೇ ಬದಲಾವಣೆ ಇಲ್ಲ.
ಕಳೆದ ವರ್ಷ ಘೋಷಿಸಿದ ರೀತಿ 7 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ
ಆದಾಯ ತೆರಿಗೆ ನೀತಿಯಲ್ಲಿ ಬದಲಾವಣೆ ಇಲ್ಲ
ಹೊಸ ತೆರಿಗೆ ಪದ್ದತಿ ಹಾಗೂ ಹಳೇ ತೆರಿಗೆ ಪದ್ದತಿ ಹಾಗೆಯೇ ಇರಲಿದೆ.
ಕಾರ್ಪೊರೇಟ್ ತೆರಿಗೆಯನ್ನು ಶೇಕಡಾ 30 ರಿಂದ 22 ಕ್ಕೆ ಇಳಿಸಲಾಗಿದೆ
ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಆಯುಷ್ಮಾನ ಭಾರತ ಯೋಜನೆ ವಿಸ್ತರಣೆ
ದೇಶಾದ್ಯಂತ ಒಂದು ಕೋಟಿ ಮನೆಗಳಿಗೆ ಸೌರ ವಿದ್ಯುತ್
ಮುಂದಿನ 5 ವರ್ಷಗಳಲ್ಲಿ 3 ಕೋಟಿ ಹೊಸ ಮನೆ ನಿರ್ಮಾಣ
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 4 ಕೋಟಿ ರೈತರಿಗೆ ಬೆಳೆ ವಿಮೆ
‘ಜೈ ಜವಾನ, ಜೈ ಕಿಸಾನ, ಜೈ ವಿಜ್ಞಾನ ಹಾಗೂ ಜೈ ಅನುಸಂಧಾನ’ ಮೋದಿ ಸರ್ಕಾರದ ಮಂತ್ರ
ಲಕ್ಷ ದ್ವೀಪ ಸೇರಿದಂತೆ ಹಲವೆಡೆ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ
ಎಲೆಕ್ಟ್ರಿಕ್ ವಾಹನ ಉತ್ಪಾದನೆ, ಚಾರ್ಜಿಂಗ್ ಸ್ಟೇಷನ್ ಹೆಚ್ಚಳಕ್ಕೆ ಆದ್ಯತೆ
ದೇಶದ ಹಲವು ನಗರಗಳಲ್ಲಿ ಮೆಟ್ರೋ ರೈಲು ಮಾರ್ಗ ವಿಸ್ತರಣೆಗೆ ಅನುದಾನ
40 ಸಾವಿರ ರೈಲ್ವೆ ಬೋಗಿಗಳನ್ನು ವಂದೇ ಭಾರತ ಬೋಗಿಗಳಾಗಿ ಪರಿವರ್ತನೆ
ಉಡಾನ್ ಯೋಜನೆಯಡಿ 517 ಹೊಸ ವಾಯು ಮಾರ್ಗ, ಸಣ್ಣ ಸಣ್ಣ ನಗರಗಳಿಗೂ ವಿಮಾನ
ರಕ್ಷಣಾ ಇಲಾಖೆಗೆ 11 ಲಕ್ಷ ಕೋಟಿ ರೂ. ನಿಗದಿ, ಇದು ಕಳೆದ ಬಾರಿಗಿಂತ ಶೇ.11ರಷ್ಟು ಹೆಚ್ಚಳ, ಇದು ಜಿಡಿಪಿಯ ಶೇ.3.4ರಷ್ಟು ಕಳೆದ ಬಜೆಟ್ನಲ್ಲಿ 5.93 ಲಕ್ಷ ಕೋಟಿ ರೂಪಾಯಿ ಮೀಸಲಿರಿಸಲಾಗಿತ್ತು. ಇದು ಜಿಡಿಪಿಯ ಶೇ.1.9ರಷ್ಟಿತ್ತು.
ದೇಶದ ಒಂದು ಕೋಟಿ ಮಹಿಳೆಯರು ‘ಲಕ್ಷಾಧಿಪತಿ ದೀದಿ’ ಆಗಿಸುವ ಗುರಿ
2047ಕ್ಕೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರ
ಜಾಗತಿಕವಾಗಿ ಆರ್ಥಿಕ ಸಂಕಷ್ಟ ಸ್ಥಿತಿ ಇದ್ದರೂ ಭಾರತದ ಆರ್ಥಿಕತೆ ಸ್ಥಿರ
10 ವರ್ಷಗಳಲ್ಲಿ ದೇಶದ ಆರ್ಥಿಕತೆಯಲ್ಲಿ ಅಗಾಧ ಬೆಳವಣಿಗೆ
ದೇಶದ 80 ಕೋಟಿ ಜನರಿಗೆ ಉಚಿತ ಅಕ್ಕಿ ವಿತರಣೆ
ಜನ್ ಧನ್ ಖಾತೆ ಮೂಲಕ ಜನರಿಗೆ ನೇರ ಲಾಭ ವರ್ಗಾವಣೆ ಯೋಜನೆ ಜಾರಿ
ಯುವಕರು, ಬಡವರು, ಕೃಷಿಕರು ಹಾಗೂ ಮಹಿಳೆಯರು – ಈ ನಾಲ್ಕು ವರ್ಗಗಳನ್ನು ಗುರಿಯಾಗಿಸಿ ಕಾರ್ಯಕ್ರಮ
ಕುಶಲ ಕರ್ಮಿಗಳಿಗಾಗಿ ವಿಶೇಷ ಯೋಜನೆ ರೂಪಿಸಿರುವ ಕೇಂದ್ರ ಸರ್ಕಾರ
ಹೈನುಗಾರಿಕೆ ರೈತರಿಗೆ ಹಾಲು ಹೆಚ್ಚಳಕ್ಕೆ ಯೋಜನೆ
ನ್ಯಾನೋ ಯೂರಿಯಾ ಎಲ್ಲಾ ವಲಯಗಳಿಗೆ ವಿಸ್ತರಣೆ
ಆತ್ಮನಿರ್ಭರ ಆಯಿಲ್ ಸೀಡ್ ಅಭಿಯಾನ ಆರಂಭ, ಎಣ್ಣೆಬೀಜಗಳಲ್ಲಿ ಆತ್ಮನಿರ್ಭರತೆಗಾಗಿ ಹೆಚ್ಚಿನ ಒತ್ತು
ಪ್ರವಾಸಿ ತಾಣಗಳ ಅಭಿವೃದ್ಧಿಗೆ ರಾಜ್ಯಗಳಿಗೆ ಉತ್ತೇಜನ
ರಾಜ್ಯಗಳಿಗೆ 75,000 ಕೋಟಿ ರೂ.ಗಳ 50 ವರ್ಷಗಳ ಬಡ್ಡಿ ರಹಿತ ಸಾಲ ವಿಸ್ತರಣೆ
ಆರ್ಥಿಕ ವರ್ಷ 2025ರಲ್ಲಿ 5.1%ಕ್ಕೆ ನಿಗದಿ
ಸ್ಟಾರ್ಟಪ್ಗಳಿಗೆ ತೆರಿಗೆ ಪ್ರಯೋಜನಗಳು, ಪಿಂಚಣಿ ನಿಧಿಗಳು ಮಾರ್ಚ್ 2025 ರವರೆಗೆ ವಿಸ್ತರಣೆ
ದೇಶದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸರ್ಕಾರದಿಂದ ಗಣನೀಯ ಹೂಡಿಕೆ
ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ ಪ್ರವಾಸಿ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರದಿಂದ ವಿಶೇಷ ಗಮನ