ಚಿಕ್ಕೋಡಿ :
ಚಿಕ್ಕೋಡಿಯ ಹಿರಿಯ ಪತ್ರಕರ್ತ ಸುಧಾಕರ ಕೋಳಿ (44) ಶನಿವಾರ ನಿಧನರಾಗಿದ್ದಾರೆ.
ಚಿಕ್ಕೋಡಿ ತಾಲೂಕಿನ ಹಿರೇಕೊಡಿಯವರಾದ ಅವರು
ಕೆಲ ಕಾಲದಿಂದ ಅನಾರೋಗ್ಯ ಪೀಡಿತರಾಗಿದ್ದ ಅವರು ಚಿಕಿತ್ಸೆ ಫಲಿಸದೆ ನಿಧನರಾಗಿದ್ದು ಪತ್ನಿ, ಪುತ್ರ, ಪುತ್ರಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಎರಡುವರೆ ದಶಕಗಳಿಂದ
ಹಸಿರು ಕ್ರಾಂತಿ, ವಿಜಯ ಕರ್ನಾಟಕ, ಪ್ರಜಾವಾಣಿ ಮುಂತಾದ ಪತ್ರಿಕೆಗಳಲ್ಲಿ ಅವರು ಕ್ರಿಯಾಶೀಲ ವರದಿಗಾರಿಕೆ ಮೂಲಕ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.