ಬೆಳಗಾವಿ: ಬೆಳಗಾವಿಯ ಕಂಗ್ರಾಳಗಲ್ಲಿಯಲ್ಲಿ ಆಟವಾಡುತ್ತಿದ್ದ ಮಗು ಸಂಪಿಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.

ಎರಡು ವರ್ಷದ ಸಾಯೀಶಾ ಸಂದೀಪ ಬಡವನಾಚೆ ಮೃತಪಟ್ಟ ಮಗು ಆಟವಾಡುತ್ತಿದ್ದ. ಆಟವಾಡುತ್ತಿದ್ದ ಮಗು ಏಕಾಏಕಿ ನಾಪತ್ತೆಯಾಗಿದೆ. ಆಗ ಪೋಷಕರು ಹುಡುಕಾಟ ನಡೆಸಿದ್ದಾರೆ. ಎಷ್ಟು ಹುಡುಕಿದರು ಮಗು ಸಿಗಲಿಲ್ಲ. ಆಗ ನೀರಿನ ಸಂಪು ನೋಡಿದಾಗ ಮಗು ಅದರಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ. ಪೋಷಕರು ಕೂಡಲೇ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ದದ್ದರು ಸಹಾ ಫಲಕಾರಿಯಾಗಲಿಲ್ಲ. ಖಡೇ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.