ಬೆಳಗಾವಿ :
ನಾಲ್ಕು ವರ್ಷಗಳ ಹಿಂದೆ ಡಿಸೆಂಬರ್ ನಲ್ಲಿ ಇಡೀ ವಿಶ್ವವನ್ನೇ ಕಂಗಾಲು ಮಾಡಿದ್ದ ಕೋವಿಡ್ 19 ಹಾವಳಿ ಇದೀಗ ಕಡಿಮೆಯಾದ ಬೆನ್ನಿಗೆ ನ್ಯುಮೋನಿಯಾ ಹೆಸರಿನಲ್ಲಿ ಚೀನಿ ವೈರಸ್ ಜಗತ್ತಿನಲ್ಲಿ ಆತಂಕಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಆರಂಭವಾಗಿರುವ ವಿಧಾನ ಮಂಡಲದ ಚಳಿಗಾಲದ ವಿಶೇಷ ಅಧಿವೇಶನಕ್ಕೆ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ. ಶಾಸಕರು ಹಾಗೂ ಸಚಿವರು ತಂಗುವ ವಸತಿಗೃಹಗಳಲ್ಲಿ ವಿಶೇಷ ವೈದ್ಯರ ನೇಮಕ ಹಾಗೂ ತಪಾಸಣೆ ನಡೆಸಲಾಗುತ್ತಿದೆ. ಸುವರ್ಣ ವಿಧಾನಸೌಧದಲ್ಲೂ ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ ಈ ಬಾರಿ ನ್ಯುಮೋನಿಯಾ ವೈರಸ್ ಹಾವಳಿಯಿಂದ ಆಡಳಿತ ಈಗ ಫುಲ್ ಅಲರ್ಟ್ ಆಗಿದೆ.