ಬೆಳಗಾವಿ :
1997 ರಲ್ಲಿ ಸ್ಥಾಪನೆಗೊಂಡ ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಘಟಕ ಇದೀಗ 25 ನೆಯ ವರ್ಷದ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದು , ಬರುವ ಎಪ್ರಿಲ್ 20-21ರಂದು ಎರಡು ದಿವಸಗಳ ಕಾಲ ರಜತ ಮಹೋತ್ಸವವನ್ನು ಆಚರಿಸಲಿದ್ದು ತನ್ನಿಮಿತ್ತ ರಾಜ್ಯ ಮಟ್ಟದ ಚುಟುಕು ವಾಚನ ಸ್ಪರ್ಧೆಯನ್ನು ಏರ್ಪಡಿಸಿದೆ.
ಒಟ್ಟು ಹತ್ತು ಬಹುಮಾನಗಳಿರುತ್ತವೆ. ರಾಜ್ಯಮಟ್ಟದ ಪ್ರಾತಿನಿಧಿಕ ಚುಟುಕು ಸಂಕಲನವನ್ನೂ ಹೊರತರಲಿದೆ. 250 ರೂ. ಪ್ರತಿನಿಧಿ ಶುಲ್ಕವನ್ನು ತುಂಬಿ ಐದು ಚುಟುಕು, ಭಾವಚಿತ್ರ ಮತ್ತು ವಿಳಾಸ, ಮೊಬೈಲ್ ನಂಬರುಗಳನ್ನು ಕಳಿಸಿ ಹೆಸರು ದಾಖಲಿಸಿಕೊಳ್ಳುವವರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆಯಲ್ಲದೆ ಅವರಿಗೆ ಎರಡು ದಿನ ಊಟ ಉಪಾಹಾರ ವ್ಯವಸ್ಥೆ ಇರುತ್ತದೆ ಮತ್ತು ಆಯ್ದ ಮೂರು ಚುಟುಕುಗಳನ್ನು ಪ್ರಾತಿನಿಧಿಕ ಸಂಕಲನದಲ್ಲಿಯೂ ಪ್ರಕಟಿಸಿ ಎರಡು ಪ್ರತಿ ಕವಿಗಳಿಗೆ ಕೊಡಲಾಗುವುದು. ಚುಟುಕುಗಳನ್ನು ಜನವರಿ 30, 2024 ರೊಳಗೆ ಬಸವರಾಜ ಗಾರ್ಗಿ , ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, 73/ ಹೊಂಗನಸು, ರಾಣಿ ಚೆನ್ನಮ್ಮ ಹೌಸಿಂಗ್ ಸೊಸೈಟಿ, ಶ್ರೀನಗರ, ಬೆಳಗಾವಿ- 590017
(ಮೊಬೈಲ್ ಸಂಖ್ಯೆ : 8453500025)- ಇವರಿಗೆ ಕಳಿಸಬಹುದು ಎಂದು ಜಿಲ್ಲಾದ್ಯಕ್ಷ ಎಲ್. ಎಸ್. ಶಾಸ್ತ್ರಿ ತಿಳಿಸಿದ್ದಾರೆ.