ಬೆಳಗಾವಿ :
ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನ್ನು ಬಿಜೆಪಿ ಟೀಕಿಸಿದೆ.
3.7ಲಕ್ಷ ಕೋಟಿ ಬಜೆಟ್ ಮಂಡಿಸಿ ಲಕ್ಷ ಕೋಟಿ ಸಾಲ ಮಾಡಿ ಪ್ರತಿಯೊಬ್ಬ ಕನ್ನಡಿಗನ ಮೇಲೆ 28ಸಾವಿರ ಸಾಲದಹೊರೆ ಹೊರಿಸಿರುವುದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಧನೆ.
ಇದೊಂದು ಬಹುಸಂಖ್ಯಾತರ ತೆರೆಗೆ ಹಣವನ್ನು ಅಲ್ಪಸಂಖ್ಯಾತರಿಗೆ ನೀಡಿದ ಬಜೆಟ್ ಆಗಿದೆ. ವಿದ್ಯಾರ್ಥಿಗಳಿಗೆ ಕೊಡುತ್ತಿರುವ ವಿದ್ಯಾರ್ಥಿ ವೇತನ ನಿಲ್ಲಿಸಿ ಕೆಲವೆ ಸಮುದಾಯದ ವಿದ್ಯಾರ್ಥಿಗಳಿಗೆ ನಿರ್ಣಯ ಕೈಗೊಂಡಿರುವದು ದುರದೃಷ್ಟಕರ ಬಜೆಟ್ ಇದಾಗಿದೆ.
*ಸುಭಾಷ್ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷರು, ಬೆಳಗಾವಿ (ಗ್ರಾ) ಜಿಲ್ಲೆ
ಕರ್ನಾಟಕದ ದೌರ್ಭಾಗ್ಯ :
ಕೆಲ ಕುಟುಂಬಕ್ಕೆ ಗೃಹ ಲಕ್ಷಿ ಗ್ಯಾರಂಟಿಯಲ್ಲಿ ವಾರ್ಷಿಕ 24 ಸಾವಿರ ರೂಪಾಯಿ ನೀಡಿ ಪ್ರತಿಯೊಬ್ಬರ ತಲೆಯ ಮೇಲೆ 28ಸಾವಿರ ರೂಪಾಯಿ ಸಾಲ ಮಾಡುವದರೊಂದಿಗೆ ಶೇ 14ರಷ್ಟು ಮುದ್ರಾಂಕ ಶುಲ್ಕ ಹೆಚ್ಚಿಸಿ ರೈತರ ಕಿಸೆಗೆ ಕನ್ನ ಹಾಕಿದೆ. ವಾಹನದ ನೋಂದಣಿ ತೆರಿಗೆ ಶೇ7ರಷ್ಟು ಹೆಚ್ಚಿಸಿ ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಒಂದು ಕಡೆ ಆಸೆ ತೋರಿಸಿ ರಾಜ್ಯದ ಜನತೆಯ ಮೇಲೆ ಭಾರ ಹಾಕಿ, ಕೇಂದ್ರ ಸರ್ಕಾರವನ್ನು ದೂರುವುದರಲ್ಲಿ ಕಾಲ ಕಳೆದು ಜಾತಿ ಜಾತಿಗಳ ನಡುವೆ ಬಿರುಕು ಮೂಡಿಸುವ ಬಜೆಟ್ ಮಂಡನೆ ಮಾಡಿರುವದು ಕರ್ನಾಟಕದ ದೌರ್ಭಾಗ್ಯ.
*ಎಫ್.ಎಸ್.ಸಿದ್ದನಗೌಡರ ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕರು.