ಪಟ್ಟಣಂತಿಟ್ಟ:
ಶಬರಿಮಲೆ ಅಯ್ಯಪ್ಪ ಸನ್ನಿಧಾನಕ್ಕೆ ಪ್ರವಾಹೋಪಾದಿಯಲ್ಲಿ ಭಕ್ತಾದಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದರ್ಶನದ ಅವಧಿಯನ್ನು ಒಂದು ಗಂಟೆ ಹೆಚ್ಚಿಸಲಾಗಿದೆ.
ದರ್ಶನದ ದ್ವಿತೀಯ ಚರಣದಲ್ಲಿ ಒಂದು ಗಂಟೆ ಮುಂಚಿತವಾಗಿ ಬಾಗಿಲು ತೆರೆಯಲಿದ್ದು, 4 ಗಂಟೆಯ ಬದಲಾಗಿ 3 ಗಂಟೆಯಿಂದಲೇ ದೇಗುಲದ ಬಾಗಿಲು ತೆರೆಯಲಾಗುತ್ತದೆ.
ನ.16 ರಿಂದ ಮಕರವಿಳಕ್ಕು ಪ್ರಯುಕ್ತ ಆರಂಭವಾದ ದರ್ಶನದಲ್ಲಿ ಪ್ರತಿದಿನ ಸರಾಸರಿ ಪ್ರತಿದಿನ 1 ಲಕ್ಷದ 20 ಸಾವಿರ ಜನ ದರ್ಶನ ಪಡೆಯುತ್ತಿದ್ದಾರೆ.