ಬೀದರ್: ಬೀದರ್ ತಾಲೂಕಿನ ಅಣದೂರು ಗ್ರಾಮದಲ್ಲಿ ಪತ್ನಿಯ ಅನೈತಿಕ ಸಂಬಂಧದಿಂದ ಮನನೊಂದು ಪತಿ ಓವರ್ ಹೆಡ್ ಟ್ಯಾಂಕ್ ಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ಅದೇ ನೀರನ್ನು ಕುಡಿದ ಜನ ಇದೀಗ ಕಕ್ಕಾಬಿಕ್ಕಿ ಆಗಿದ್ದಾರೆ.

ಗ್ರಾಮದ ರಾಜಕುಮಾರ್ ದಾಸ ಆತ್ಮಹತ್ಯೆ ಮಾಡಿಕೊಂಡವ. ಆತ್ಮಹತ್ಯೆ ಮಾಡಿಕೊಂಡ ಮೂರು ದಿನಗಳ ಬಳಿಕ ಶವ ಪತ್ತೆಯಾಗಿದ್ದು ನೀರು ವಾಸನೆ ಬಂದ ಕಾರಣ ಯುವಕ ಟ್ಯಾಂಕ್ ಹತ್ತಿ ನೋಡಿದಾಗ ಶವ ಇರುವುದು ಬೆಳಕಿಗೆ ಬಂದಿದೆ. ಮೂರು ದಿನಗಳಿಂದ ನೀರು ಸೇವಿಸಿರುವ ಜನ ಈಗ ಆತಂಕ ಕೊಳಗಾಗಿದ್ದು ವೈದ್ಯರು ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. 1.5 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕರ್ ಇದಾಗಿದೆ. ಸುಮಾರು 300 ಜನ ಈ ನೀರು ಅವಲಂಬಿಸಿದ್ದಾರೆ.

ಗ್ರಾಮದ ಮನೆ-ಮನೆಗೆ ಸರಬರಾಜು ಆಗುತ್ತಿದ್ದ ನೀರು ಗಬ್ಬು ನಾರುತಿತ್ತು ಈ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳಿಗೆ ದೂರನ್ನು ಸಹ ನೀಡಿದ್ದರು. ಮೊದಲಿಗೆ ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣ ಆಗಿರಬಹುದು ಎಂದು ಜನ ಅನುಮಾನಪಟ್ಟಿದ್ದರು. ಕೆಲ ವೇಳೆ ನೀರಲ್ಲಿ ಕೂದಲು ಬರುತ್ತಿತ್ತು. ಕುಡಿಯಲು ಆಗದಷ್ಟು ನೀರು ಗಬ್ಬು ನಾರುತ್ತಿತ್ತು. ಇದೀಗ ಸತ್ಯ ವಿಷಯ ಬೆಳಕಿಗೆ ಬಂದ ಬೆನ್ನಲ್ಲೇ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.