ಬೆಳಗಾವಿ : ಬೆಳಗಾವಿ ನಗರದ ಹಿಂಡಲಗಾ ಲಕ್ಷ್ಮೀ ನಗರದ ಸಾರ್ವಜನಿಕ ಸ್ಥಳದಲ್ಲಿ ಗೋವಾ ರಾಜ್ಯದ ಅಕ್ರಮ ಸಾರಾಯಿ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದಾನೆಂದು ಬಂದ ಖಚಿತ ಮಾಹಿತಿ ಮೇರೆಗೆ ಡಿಸಿಪಿ ಸ್ನೇಹಾ ಪಿ ವಿ ಮಾರ್ಗದರ್ಶನದಲ್ಲಿ ಸಿಸಿಬಿ ಪಿಐ ಸಿಬ್ಬಂದಿಯವರ ತಂಡ ಗುರುವಾರ ದಾಳಿ ಮಾಡಿ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಮದ್ಯ ಹಾಗೂ ಕಾರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಗೋವಾ ಹಾಗೂ ಮಿಲಿಟರಿ ಕ್ಯಾಂಟೀನ್ ಮದ್ಯ ಎಂದು ಹೇಳಿಕೊಂಡು 24X7 ಮದ್ಯ ಮಾರಾಟ ಮಾಡುವ ಹಿಂಡಲಗಾ ರಾಜು ಎಂದು ಪ್ರಸಿದ್ಧಿ ಪಡೆದಿರುವ
ರಾಜೇಶ ಕೇಶವ ನಾಯಕ (41) ಸಾ: ಹಿಂಡಲಗಾ, ಬೆಳಗಾವಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಇವನನ್ನು ವಶಕ್ಕೆ ಪಡೆದುಕೊಂಡ ಸಿಸಿಬಿಯವರು ಅವನ ಬಳಿ ವಿವಿಧ ಕಂಪನಿಯ ಗೋವಾ ರಾಜ್ಯದ ಸುಮಾರು 186.5 ಲೀಟರ್ ಅಂದಾಜು ಬೆಲೆ ರೂ.9,09,750/- ಬೆಲೆಯ ಅಕ್ರಮ ಸಾರಾಯಿ ತುಂಬಿ ಬಾಟಲಿಗಳನ್ನು, ಕೃತ್ಯಕ್ಕೆ ಬಳಸಿದ ಕಾರು ಒಂದು ಅಕಿ. 1,50,000/- ಹಾಗೂ ನಗದು ಹಣ 350 ಹೀಗೆ ಒಟ್ಟು 10,60,100/- ಮೌಲ್ಯದ ವಸ್ತುಗಳನ್ನು ಜಪ್ತಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಈ ದಾಳಿಯಲ್ಲಿ ಪಾಲ್ಗೊಂಡ ಯಶಸ್ವಿ ಕಾರ್ಯಾಚರಣೆ ನಡೆಸಿರುಬ ಸಿಸಿಬಿ ಘಟಕದ ಪಿಐ, ಸಿಬ್ಬಂದಿ ಶಿರಸಂಗಿ ಸೇರಿದಂತೆ ಇತರರ ಕಾರ್ಯವನ್ನು ಪೊಲೀಸ್ ಆಯುಕ್ತರು, ಡಿಸಿಪಿ (ಕಾ&ಸು), ಡಿಸಿಪಿ (ಅ&ಸಂ), ಶ್ಲಾಘಿಸಿದ್ದಾರೆ.