ಬೆಳಗಾವಿ : ಖಾನಾಪುರ ವಿಧಾನಸಭಾ ಕ್ಷೇತ್ರದ ಖಾನಾಪುರ ತಾಲೂಕು ಕಣಕುಂಬಿ ಚೆಕ್ ಪೋಸ್ಟ್ ನಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿರುವ ಅನಧಿಕೃತ ರಕಂ ಮುಟ್ಟುಗೋಲು ಹಾಕಲಾಗಿದೆ.

ಕಣಕುಂಬಿ ಚೆಕ್ ಪೋಸ್ಟಿನಲ್ಲಿ ಇಂದು ದಿನಾಂಕ 29-03-2024 ರ ಮುಂಜಾನೆ 8.30 ಘಂಟೆ ಸಮಯಕ್ಕೆ ಸಂಜಯ ಬಸವರಾಜ ರೆಡ್ಡಿ, ಗಾಂಧಿ ನಗರ ಓಣಿ, ವಣ್ಣೂರ, ಬೈಲಹೊಂಗಲ ಬೆಳಗಾವಿ-591121 ಇವರು ಪ್ರಯಾಣಿಸುತ್ತಿದ್ದ ವಾಹನ/ಬಸ್ಸು ಸಂಖ್ಯೆ ಕೆ.ಎ-29 ಎಪ್-1532 ವಾಹನವು ಗೋವಾ ರಾಜ್ಯದಿಂದ ಬೆಳಗಾವಿಗೆ ಹೋಗುವ ಸಮಯದಲ್ಲಿ ವಾಹನವನ್ನು ಕರ್ತವ್ಯನಿರತ ಎಸ್.ಎಸ್.ಟಿ ತಂಡದವರು ಮತ್ತು ಪೋಲಿಸ್ ಸಿಬ್ಬಂದಿಗಳು ತಪಾಸಣೆ ಮಾಡಲಾಗಿ 7,98,000/- (ಏಳು ಲಕ್ಷದ ತೊಂಭತ್ತೆಂಟು ಸಾವಿರ) ರೂ.ಗಳನ್ನು ಯಾವುದೇ ದಾಖಲೆಗಳಿಲ್ಲದ ನಗದು ದೊರಕಿದ್ದು, ಅಧಿಕೃತ ದಾಖಲೆಗಳು ಪರಿಶೀಲನಾ ಸ್ಥಳದಲ್ಲಿ ಲಭ್ಯವಿಲ್ಲದ ಕಾರಣ ನಿಯಮಾನುಸಾರ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಮುಟ್ಟುಗೋಲು ಹಾಕಿಕೊಂಡ ರೂ. 7.98.000/- (ಏಳು ಲಕ್ಷದ ತೊಂಭತ್ತೆಂಟು ಸಾವಿರ) ರೂಪಾಯಿ ಹಣವನ್ನು ಖಾನಾಪುರದ ಉಪ ಖಜಾನೆಯಲ್ಲಿ ಇರಿಸಲಾಗಿದೆ ಎಂದು ಎಸ್ಎಸ್ ಟಿ ತಂಡದ ಅಧಿಕಾರಿ ಮಲಗೌಡ ಪಾಟೀಲ ಅವರು ಸಹಾಯಕ ಚುನಾವಣಾಧಿಕಾರಿಗಳು ಖಾನಾಪುರ ವಿಧಾನಸಭಾ ಕ್ಷೇತ್ರ ಇವರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.