ತೋಕೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ “ಜ್ಞಾನದೀಪ” ಕಾರ್ಯಕ್ರಮ ಅಡಿಯಲ್ಲಿ ಪೆರ್ಮುದೆ ಹಿರಿಯ ಪ್ರಾಥಮಿಕ ಶಾಲೆ 62 ನೇ ತೋಕೂರು ಇಲ್ಲಿಗೆ ಬೆಂಚು, ಡೆಸ್ಕ್ ಕೊಡುಗೆಯಾಗಿ ನೀಡಿದ್ದು, ಇದರ ಹಸ್ತಾoತರ ಕಾರ್ಯಕ್ರಮವು ವಲಯಧ್ಯಕ್ಷರಾದ ಜಯರಾಮರವರ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶಾಲಾ ಸಮಿತಿ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರು, ಒಕ್ಕೂಟದ ಪದಾಧಿಕಾರಿಗಳು, ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ಶೋಭಾ ವಲಯದ ಮೇಲ್ವಿಚಾರಕಿ ಅರುಣಾ ಸಾಲ್ಯಾನ್ , ಸೇವಾಪ್ರತಿನಿಧಿ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.