ಅಥಣಿ :
ಅಖಂಡ ಬೆಳಗಾವಿ ಜಿಲ್ಲೆಯು ಕರ್ನಾಟಕದ ಎರಡನೇ ರಾಜಧಾನಿಯಾಗಲಿ, ಬೆಳಗಾವಿಯಿಂದ ಅಥಣಿಯನ್ನು ಪ್ರತೇಕವಾಗಿಸಿ ಅಥಣಿ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅವರು ಇಂದು ಅಥಣಿ ಜಿಲ್ಲಾ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಅಥಣಿ ಬಂದ್ ಮತ್ತು ಪ್ರತಿಭಟನಾ ರ್ಯಾಲಿ ಸಂದರ್ಭದಲ್ಲಿ ಮಾತನಾಡುತ್ತಿದ್ದರು.

ಬೆಳಗಾವಿ ದೊಡ್ಡ ಜಿಲ್ಲೆಯಾಗಿ ಮುಂದುವರೆಯಲಿ. ಅಥಣಿಗೆ ಪಕ್ಕದ ಕ್ಷೇತ್ರಗಳಾದ ಕಾಗವಾಡ, ಕುಡಚಿ, ರಾಯಬಾಗ,ಹಾರೂಗೇರಿಗಳ ಜೊತೆಗೆ ಬಾಗಲಕೋಟೆ ಜಿಲ್ಲೆಯ ಎರಡು ಕೇತ್ರಗಳನ್ನು ಸೇರಿಸಿಕೊಂಡು ಅಥಣಿ ಪ್ರತ್ಯೇಕ ಜಿಲ್ಲೆಯಾಗಿ ಮಾಡಿದಲ್ಲಿ ಈ ಭಾಗದ ಜನರು ತಮ್ಮ ಕೆಲಸ ಕಾರ್ಯಗಳಿಗೆ ಬೆಳಗಾವಿಗೆ ತಲುಪಬೇಕಾದಲ್ಲಿ ಸುಮಾರು ೨೦೦ ಕಿಮೀ ದೂರ ಹೋಗಿ ಬರಬೇಕಾಗುತ್ತದೆ ಸಮಯವು ವ್ಯರ್ಥವು ಆಗುತ್ತದೆ ಅದನ್ನು ತಪ್ಪಿಸಿದಂತೆ ಆಗುವುದರ ಜೊತೆಗೆ ಜನರಿಗೆ ಆಗುತ್ತಿರುವ ಬವಣೆ ನೀಗಿಸಿದಂತೆ ಯಾಗುತ್ತದೆ ಆಡಳಿತತ್ಮಾಕವಾಗಿ ದೃಷ್ಟಿಯಿಂದ ಆಡಳಿತ ಜನರ ಸಮೀಪ ತರುವುದಕ್ಕೆ ಅಥಣಿ ಅನುಕೂಲವಾಗಲಿದೆ. ಈ ಕುರಿತು ನಾನು ಬೆಳಗಾವಿ ಅಧಿವೇಶನದಲ್ಲಿ ದ್ವನಿ ಎತ್ತಲಿದ್ದೇನೆ ಎಂದರು.

ಅಖಂಡ ಬೆಳಗಾವಿ ಜಿಲ್ಲೆಯಲ್ಲಿ ಕೊನೆಯ ತಾಲೂಕು ಅಥಣಿ ಇರುವದರಿಂದ ಸುಗಮ ಆಡಳಿತ್ಮಾಕ ದೃಷ್ಟಿಯಿಂದ ಜಿಲ್ಲೆಯನ್ನು ವಿಭಾಗಿಸುವುದು ಅನಿವಾರ್ಯವು ಸೂಕ್ತವಾಗಿದೆ, ಈ ಭಾಗದ ಸಮಾನ ಮನಸ್ಕರ ಶಾಸಕರ ಜೊತೆಗೆ ಸೇರಿ ಸದನದಲ್ಲಿ ಧ್ವನಿ ಎತ್ತಿ ರಾಜಕೀಯವಾಗಿಯೂ ಕಾವು ಪಡೆದುಕೊಳ್ಳುವಂತೆ ಮಾಡಲಾಗುವುದು ಎಂದರು. ಬೆಳಗಾವಿ ಅಧಿವೇಶನ ನಡೆಯತ್ತಿರುವುದರಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಭೇಟಿ ಮಾಡಿ ಪ್ರತ್ಯೇಕ ಜಿಲ್ಲೆಯ ಅಗತ್ಯತೆ ಕುರಿತು ಮನವರಿಕೆ ಮಾಡಕೊಡಲಾಗುವುದು ಎಂದು ತಿಳಿಸಿದರು

ಈ ವೇಳೆ ಹೋರಾಟ ಸಮಿತಿ ಅದ್ಯಕ್ಷ ಪ್ರಶಾಂತ ತೋಡಕರ,ಗೌರವ ಅದ್ಯಕ್ಷ ಶಿವಕುಮಾರ ಸವದಿ,ಆನಂದ ದೇಶಪಾಂಡೆ,ಮಾಜಿ ಶಾಸಕ ಶಹಾಜಹಾನ ಡೊಂಗರಗಾವ,ಮುಖಂಡರುಗಳಾದ ಸದಾಶಿವ ಬುಟಾಳಿ,ಗಜಾನನ ಮಂಗಸೂಳಿ,ಸಿದ್ದಾರ್ಥ ಸಿಂಗೆ, ಶಿವರುದ್ರ ಗೂಳಪ್ಪನವರ,ರಾಜು ಅಳಬಾಳ,ಸತೀಶ ಪಾಟೀಲ್, ದೀಪಕ ಬುರ್ಲಿ,ರವಿ ಬಡಕಂಬಿ ಮಲ್ಲು ಹುದ್ದಾರ,ದತ್ತಾ ವಾಸ್ಟರ ಪ್ರಮೋದ ಬಿಳ್ಳೂರ,ಚಂದು ತೇರದಾಳ ಸೇರಿದಂತೆ ವಿವಿಧ ಮಠಾಧೀಶರು ಸಾರ್ವಜನಿಕರು ಸಾವಿರಾರು ಜನ ಯಾರ್ಲಿಯಲ್ಲಿ ಭಾಗವಹಿಸಿದ್ದರು,ಅಥಣಿ ಪಟ್ಟಣದಲ್ಲಿ ಬೆಳಗಿನಿಂದ ಅಂಗಡಿ ಮುಗ್ಗಟ್ಟುಗಳನ್ನು ಬಂದ ಮಾಡುವ ಮೂಲಕ ವ್ಯಾಪರಸ್ಥರು ಬಂದಗೆ ಸಹಕರಿಸಿದರು.