ಬೆಳಗಾವಿ : ಧಾರವಾಡ ಜಿಲ್ಲೆಯ ಬೇಲೂರು ಗ್ರಾಮದಿಂದ ದಿಂಡಿ ಯಾತ್ರಾ ದೇಹು, ಆಳಂದಿ ಮಾರ್ಗವಾಗಿ ಪಂಢರಪುರಕ್ಕೆ ಹೋಗುವ ದಿಂಡಿ ಬೆಳಗಾವಿ ವಕೀಲ ಸದಾಶಿವ ರು. ಹಿರೇಮಠ ಅವರ ಮನೆಗೆ ಶನಿವಾರ ಸಂಜೆ 5.೦೦ ಗಂಟೆಗೆ ಆಗಮಿಸಿತು. ಭಕ್ತರಿಂದ ವಿಶೇಷ ಪೂಜೆ ನೆರವೇರಿತು.

ಸದಾಶಿವ ಅವರ ಕುಟುಂಬದವರು ದಿಂಡಿಯ ಸದಸ್ಯರಿಗೆ ಆತ್ಮೀಯವಾಗಿ ಸ್ವಾಗತ ಕೋರಿದರು. ನಂತರ ಸಂಜೆ 7 ಗಂಟೆಗೆ ಸುಭಾಷ ಜೋಶಿ ಬೆಳಗಾವಿ ಅವರಿಂದ ಭಜನೆ ಮತ್ತು ಕೀರ್ತನೆ ಕಾರ್ಯಕ್ರಮ ನಡೆಯಿತು.
ದಿಂಡಿಯಲ್ಲಿ ಬಂದ ವಾರಕರಿ ಗಳಿಂದ ಹರಿನಾಮ, ಭಜನೆ ಮತ್ತು ಮಂಗಳಾರತಿ ನಡೆಯಿತು. ಅನಂತರ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ
ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ,
ಸೋಮಶೇಖರ ಹಿರೇಮಠ, ಗಿರೀಶ ಬಾಳೇಕುಂದ್ರಿ, ರಾಜು ಗುರವ, ಭರತ ಅನಿಗೊಳ, ನಗರ ಸೇವಕ ರಾಜಶೇಖರ ಡೋಣಿ, ಹನುಮಂತ ಕೊಂಗಾಲಿ,

ಮಹಾಲಕ್ಷ್ಮಿ ಮಹಿಳಾ ಮಂಡಳದ ಸದಸ್ಯರು ಹಾಗೂ ಮಹಂತೇಶ ನಗರದ ಭಕ್ತರು ಪಾಲ್ಗೊಂಡಿದ್ದರು. ಮರುದಿನ ಬೆಳಗ್ಗೆ 6 ಗಂಟೆಗೆ ದಿಂಡಿ ಮುಂದಿನ ಪ್ರವಾಸಕ್ಕೆ ತೆರಳಿತು.