ಬೆಳಗಾವಿ :
ಬೆಳಗಾವಿಯಲ್ಲಿ ಹೆಣ್ಣು ಮಗು ಮಾರಾಟ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ರಾಜಕುಮಾರ ಸಿಂಗಪ್ಪಾ ರಾಠೋಡ ಸಾ: ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ದತ್ತು ಕೇಂದ್ರದ ಸಂಯೋಜಕರು ರಾಮತೀರ್ಥ ನಗರ ಬೆಳಗಾವಿ ಇವರು ಈ ದಿನಾಂಕ: ೦೯-೦೬-೨೦೨೪ ರಂದು ಮಾಳಮಾರುತಿ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಪಿರ್ಯಾದಿ ಕೊಟ್ಟಿದ್ದು ಅದರಲ್ಲಿ ೦೯-೦೬-೨೦೨೪ ರಂದು ಬೆಳಿಗ್ಗೆ ೬ ಗಂಟೆಯ ಸುಮಾರಿಗೆ ಆರೋಪಿತಳಾದ ಮಹಾದೇವಿ @ ಪ್ರಿಯಾಂಕಾ ಗಂಡ ಬಾಹುಬಲಿ ಜೈನ್ ಸಾ: ನೇಗಿನಹಾಳ ತಾ: ಬೈಲಹೊಂಗಲ ಇವರು ಇದರಲ್ಲಿಯ ಮತ್ತೊಬ್ಬ ಆರೋಪಿತನಾದ ಡಾ: ಅಬ್ದುಲಗಫಾರ ಹುಸೇನಸಾಬ ಲಾಡಖಾನ ಸಾ: ಹಂಚಿನಾಳ ತಾ: ಸವದತ್ತಿ ಹಾಲಿ: ಸೋಮವಾರ ಪೇಠ ಕಿತ್ತೂರ ಇವನಿಂದ ಹಣ 6೦,೦೦೦/- ರೂ ಕೊಟ್ಟು ಅಂದಾಜು 3೦ ದಿನದ ಹೆಣ್ಣು ಮಗುವನ್ನು ಖರೀದಿ ಮಾಡಿ ಸದರಿ ಹೆಣ್ಣು ಮಗುವನ್ನು ಬೆಳಗಾವಿಯಲ್ಲಿ ಮಾರಾಟ ಮಾಡಲು ಉದ್ದೇಶಿಸಿದಾಗ ಮಾಹಿತಿ ದೊರೆತಿದಿದ್ದು ನಂತರ ನಾವು ರಹಸ್ಯ ಕಾರ್ಯಾಚರಣೆ ನಡೆಸಿ ಸದರಿ ಶಿಶುವನ್ನು ರೋಖ ಹಣ 1,4೦,೦೦೦/- ರೂಪಾಯಿಗಳಿಗೆ ಖರೀದಿಸುವುದಾಗಿ ಇದರಲ್ಲಿ ಆರೋಪಿ ಮಹಾದೇವಿ @ ಪ್ರಿಯಾಂಕಾ ಗಂಡ ಬಾಹುಬಲಿ ಜೈನ್ ಇವಳಿಗೆ ನಂಬಿಸಿದ್ದು ನಂತರ ಆರೋಪಿತಳು ಮಗುವನ್ನು ಮಾರಾಟ ಮಾಡಲು ಬಂದಾಗ ಸದರಿ ಹೆಣ್ಣು ಮಗುವನ್ನು ರಕ್ಷಿಸಿ ಅದನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಸದರಿ ಶಿಶುವನ್ನು ಅಕ್ರಮವಾಗಿ ಖರೀದಿಸಿ ಅದನ್ನು ಮಾರಾಟ ಮಾಡಲು ಪ್ರಯತ್ನಿಸಿದ ಮಹಾದೇವಿ @ ಪ್ರಿಯಾಂಕಾ ಗಂಡ ಬಾಹುಬಲಿ ಜೈನರ ಸಾ: ನೇಗಿನಹಾಳ ತಾ: ಬೈಲಹೊಂಗಲ ಇವಳ ಮೇಲೆ ನಮ್ಮದು ಪಿರ್ಯಾದಿ ಇರುತ್ತದೆ ಅಂತಾ ವಗೈರೆ ನಮೂದ ಇದ್ದ ಪಿರ್ಯಾದಿಯನ್ನು ಸ್ವೀಕರಿಸಿ ಅದನ್ನು ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: ೧೧೯/೨೦೨೪ ಕಲಂ: ೩೬೩, ೩೭೦ ಐ,ಪಿ.ಸಿ. ಮತ್ತು ೮೦, ೮೧ ಜುನೈಲ್ ಜಸ್ಟಿಸ್ (ಮಕ್ಕಳ ಸಂರಕ್ಷಣಾ ಕಾಯ್ದೆ) ೨೦೧೫ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಆರೋಪಿತರಾದ ೧) ಮಹಾದೇವಿ @ ಪ್ರಿಯಾಂಕಾ ಗಂಡ ಬಾಹುಬಲಿ ಜೈನರ ಸಾ: ನೇಗಿನಹಾಳ ತಾ: ಬೈಲಹೊಂಗಲ ೨) ಡಾ: ಅಬ್ದುಲಗಫಾರ ಹುಸೇನಸಾಬ ಲಾಡಖಾನ ಸಾ: ಹಂಚಿನಾಳ ತಾ: ಸವದತ್ತಿ ಹಾಲಿ: ಸೋಮವಾರ ಪೇಠ ಕಿತ್ತೂರ, ೩) ಚಂದನ ಗಿರಿಮಲ್ಲಪ್ಪಾ ಸುಭೇದಾರ ಸಾ: ತುರಕರ ಶೀಗಿಹಳ್ಳಿ ತಾ: ಬೈಲಹೊಂಗಲ, ೪) ಪವಿತ್ರಾ ತಂದೆ ಸೋಮಪ್ಪಾ ಮಡಿವಾಳರ ಸಾ: ಸಂಪಗಾಂವ ತಾ: ಬೈಲಹೊಂಗಲ, ೫) ಪ್ರವೀಣ ಮಂಜುನಾಥ ಮಡಿವಾಳರ ಸಾ: ಹೊಸಟ್ಟಿ ತಾ: ಧಾರವಾಡ ಇವರಿಗೆ ಪತ್ತೆ ಮಾಡಿ ಬಂಧಿಸಲಾಗಿದೆ.