ಬೆಂಗಳೂರು: ಸಾರ್ವಜನಿಕ ಆರೋಗ್ಯ ಹಾಗೂ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವ ತನ್ನ ನಿರಂತರ ಪ್ರಯತ್ನದಲ್ಲಿ, ಭಾರತದ ಪ್ರಮುಖ ಆರೋಗ್ಯ ಹಾಗೂ ನೈರ್ಮಲ್ಯದ ಬ್ರ್ಯಾಂಡ್‌ -ಯುರೇಕಾ ಫೋರ್ಬ್ಸ್‌ ನಕಲಿ ವಾಟರ್‌ ಪ್ಯೂರಿಫೈರ್‌ ವಿತರಕರು, ಸೇವಾ ಒದಗಣೆದಾರರು, ಹಾಗೂ ತಯಾರಕರ ವಿರುದ್ದ ರಾಷ್ಟ್ರವ್ಯಾಪಿ ದಾಳಿಗಳನ್ನು ನಡೆಸುವಂತಹ ಗಮನಾರ್ಹ ಉಪಕ್ರಮವನ್ನು ಕೈಗೊಂಡಿದೆ.
ಈ ನಿಟ್ಟಿನಲ್ಲಿ, ಸುರೇಕಾ ಫೋರ್ಬ್ಸ್‌ನ ಸೋಗಿನಲ್ಲಿ ಗ್ರಾಹಕರನ್ನು ವಂಚಿಸಿದ ಆರೋಪದ ಮೇಲೆ ಸುರೇಕಾ ಫೋಬ್ಸ್‌ನ ನಿರ್ದೇಶಕ, ಬಾಲಾಜಿ ಉದಯಕುಮಾರ್‌, ಜೊತೆಯಲ್ಲಿ ಅವರ 8 ಟೆಕ್ನಿಶಿಯನ್‌ಗಳನ್ನು ಬೆಂಗಳೂರಿನ ಪೋಲಿಸರು ಬಂಧಿಸಿದ್ದಾರೆ. ತಮ್ಮ ವಾಟರ್‌ಪ್ಯೂರಿಫೈರ್‌ಗಳಿಗಾಗಿ ಅನಧಿಕೃತ ಫಿಲ್ಟರ್‌ಗಳನ್ನು ಖರೀದಿಸಿ ಸುರೇಕಾ ಫೋರ್ಬ್ಸ್‌ನ ಟೆಕ್ನಿಶಿಯನ್‌ಗಳಿಂದ ವಂಚನೆಗೊಳಗಾದ ಗ್ರಾಹಕರು ಈ ವಿಷಯವನ್ನು ವರದಿ ಮಾಡಿದ್ದರು, ಹಾಗೂ ಬಂಧನಗಳನ್ನು ಪ್ರಾರಂಭಿಸಲಾಯಿತು.
ಬಾಲಾಜಿ ಉದಯಕುಮಾರ್‌, ಜೊತೆಯಲ್ಲಿ ಅವರ ಟೆಕ್ನಿಶಿಯನ್‌ಗಳಾದ, ಪ್ರಕಾಶ್‌ ನಾಯಕ್‌,ಸಂತೊಷ್‌ ನಾಯಕ್‌, ರಕ್ಷಿತ್‌ ಗೌಡ, ರಾಕೇಶ್‌ ಗೌಡ, ಹರಿಶ್‌, ಉಲ್ಲಾಸ್‌ ನಾಯಕ್‌ ಪೋಲಿಸ್‌ ಕಸ್ಟಡಿಯಲ್ಲಿದ್ದು, ವಿಚಾರಣೆ ನಡೆಯುತ್ತಿದೆ.
‘‘ನಾವು ಇತ್ತೀಚಿನ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ, ಹಾಗೂ ನಮ್ಮ ಗ್ರಾಹಕರ ಯೋಗಕ್ಷೇಮಕ್ಕೆ ನಮ್ಮ ಬದ್ಧತೆಯು ಅಚಲವಾಗಿರುತ್ತದೆ. ಅಸಲಿ ಅಕ್ವಾಗಾರ್ಡ್‌ ಫಿಲ್ಟರ್‌ಗಳನ್ನು ಖರೀದಿಸುವುದರಿಂದ ಹಾಗೂ ಅಳವಡಿಸುವುದರಿಂದ ಗ್ರಾಹಕರಿಗೆ ಶುದ್ಧ ನೀರಿನ ಗ್ಯಾರಂಟೀಯನ್ನು ನೀಡುತ್ತದೆ, ಹಾಗೂ ಆದ್ದರಿಂದ ನಾವು ನಮ್ಮ ಗ್ರಾಹಕರನ್ನು ಮೋಸಗೊಳಿಸುವ ಹಾಗೂ ಅವರ ಆರೋಗ್ಯವನ್ನು ಅಪಾಯದಲ್ಲಿ ಸಿಲುಕಿಸುವ ನಿರ್ವಾಹಕರಿಂದ ಅನಧಿಕೃತ ಫಿಲ್ಟರ್‌ಗಳನ್ನು ಅಳವಡಿಸುವುದರ ವಿರುದ್ಧ ನಮ್ಮ ಗ್ರಾಹಕರಿಕೆ ನಿಂತರವಾಗಿ ತಿಳುವಳಿಕೆಯನ್ನು ನೀಡುತ್ತೇವೆ ಹಾಗೂ ಅವರನ್ನು ರಕ್ಷಿಸುತ್ತೇವೆ. ನಾವು ಬೆಂಗಳೂರಿನ ಪೋಲೀಸರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇವೆ ಹಾಗೂ ಅಧಿಕಾರಿಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವುದನ್ನು ಮುಂದುವರಸುತ್ತೇವೆ ಹಾಗೂ ಕಾನೂನು ಪ್ರಕ್ರಿಯೆಗಳ ಉದ್ದಕ್ಕೂ ಅಗತ್ಯವಾದ ಬೆಂಬಲವನ್ನು ನೀಡುತ್ತೇವೆ. ಅಂತಹ ಇತರ ನಿರ್ವಾಹಕರಿಗೆ ಈ ಬಂಧನಗಳಿಂದ ಎಚ್ಚರಿಕೆ ನೀಡಲಾಗಿದೆ ಹಾಗೂ ಇದರ ಪರಿಣಾಮವಾಗಿ ಗ್ರಾಹಕರಿಗೆ ಮೋಸ ಮಾಡುವುದನ್ನು ನಿಲ್ಲಿಸುತ್ತಾರೆ ಎಂದು ಭಾವಿಸುತ್ತೇವೆ’’ ಎಂದು ಯುರೇಕಾ ಫೋರ್ಬ್ಸ್‌ನ ವಕ್ತಾರರು ತಿಳಿಸಿದ್ದಾರೆ.

 

ಬೆಳವಣಿಗೆಗಳು ಹಾಗೂ ಕಾನೂನು ಪ್ರಕ್ರಿಯೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ಯುರೇಕಾ ಫೋರ್ಬ್ಸ್‌ ಬದ್ಧವಾಗಿರುತ್ತದೆ. ಸುರೇಕಾ ಫೋರ್ಬ್ಸ್‌ ಹಾಗೂ ಅದರ ಅಂಗಸಂಸ್ಥೆಗಳ ವಿರುದ್ದ ಅನೇಕ ಎಫ್‌ಐಆರ್‌ ದಾಖಲಿಸುವ ಕ್ರಮಗಳು ಕಾನೂನಿನ ಅವಿಧೇಯತೆಯ ಪ್ರಬಲವಾದ ಪ್ರಕರಣವನ್ನು ಪ್ರಸ್ತುತಪಡಿಸುತ್ತದೆ, ಇದು ವಿವಿಧ ಕಾನೂನು ವೇದಿಕೆಗಳ ಸಮ್ಮುಖದಲ್ಲಿ ವಂಚಕರು ಹಾಗೂ ಸಂಬಂಧಿತ ಘಟಕಗಳು/ವ್ಯಕ್ತಿಗಳ ವಿರುದ್ಧ ಸರಿಪಡಿಸುವ ಕ್ರಮವನ್ನು ತೆಗೆದುಕೊಳ್ಳುವಲ್ಲಿ ಸಹಾಯ ಮಾಡುತ್ತದೆ.
ಯುರೇಕಾ ಫೋರ್ಬ್ಸ್‌ ಕುರಿತು:
ಯುರೇಕಾ ಫೋರ್ಬ್ಸ್‌ ಲಿಮಿಟೆಡ್‌ ಭಾರತದ ಪ್ರಮುಖ ಆರೋಗ್ಯ ಹಾಗೂ ನೈರ್ಮಲ್ಯದ ಬ್ರ್ಯಾಂಡ್‌ ಆಗಿರುತ್ತದೆ. ನಾಲ್ಕು ದಶಕಗಳ ಅಸ್ತಿತ್ವದೊಂದಿಗೆ, ಇಂದು ಇದು ಒಂದು ಮಲ್ಟಿಪ್ರಾಡಕ್ಟ್‌,ಮಲ್ಟಿಚ್ಯಾನೆಲ್‌ ಸಂಸ್ಥೆಯಾಗಿರುತ್ತದೆ. ಯುರೇಕಾ ಫೋರ್ಬ್ಸ್‌, ಪ್ರಾಡಕ್ಟ್‌ ಪೋರ್ಟ್‌ಫೋಲಿಯೋವು ವಾಟರ್ ಪ್ಯೂರಿಫಿಕೇಶನ್‌, ವ್ಯಾಕ್ಯೂಮ್‌ ಕ್ಲೀನಿಂಗ್‌,ಏರ್‌ ಪ್ಯೂರಿಫಕೇಶನ್‌ ಹಾಗೂ ಹೋಮ್‌ ಸೆಕ್ಯೂರಿಟಿ ಸೊಲ್ಯೂಶನ್‌ಗಳನ್ನು ಒಳಗೊಂಡಿದೆ. ಇದು 8 ಮಿಲಿಯನ್‌ ಸಂತೃಪ್ತ ಗ್ರಾಹಕರ ನೆಲಯನ್ನು ಹೊಂದಿರುತ್ತದೆ. ಇದು ರಿಟೇಲ್‌,ಇ-ಕಾಮರ್ಸ್‌ ಹಾಗೂ ಸಾಂಸ್ಥಿಕ ಚ್ಯಾನೆಲ್‌ಗಳು, ಸೃಜನಶೀಲ ಬಿಜಿನೆಸ್‌ ಪಾರ್ಟ್ನರ್‌ ನೆಟ್‌ವರ್ಕ್‌, ಗ್ರಾಮೀಣ ಚ್ಯಾನೆಲ್‌ ಅನ್ನು ಹೊಂದಿರುತ್ತದೆ ಹಾಗೂ ಭಾರತದಲ್ಲಿ 10500+ ಪಿನ್‌ಕೋಡ್‌ಗಳ ಅಂದಾಜು ವ್ಯಾಪ್ತಿಯೊಂದಿಗೆ ಅತ್ಯಂತ ವಿಸ್ತಾರವಾದ ಸೇವಾ ನೆಟ್‌ವರ್ಕ್‌ಗಳಲ್ಲಿ ಒಂದಾಗಿರುತ್ತದೆ.