ಬೆಂಗಳೂರು ಕಂಬಳದ ಮೂಲಕ ಇದೀಗ ರಾಜಕಾರಣಿಗಳು ಒಂದಾಗಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರ ಮನಸ್ಸನ್ನು ಒಡೆದು ಘಾಸಿಗೊಳಿಸಿದ್ದಾರೆ. ಇಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಗಡಿರೇಖೆಯಲ್ಲಿ ಮಾತ್ರ ಪ್ರತ್ಯೇಕಗೊಂಡಿವೆ.
ಸಾಂಸ್ಕೃತಿಕ ಹಾಗೂ ಹಬ್ಬ ಹರಿದಿನಗಳಲ್ಲಿ ಒಂದೇ ಆಗಿವೆ. ಇಷ್ಟು ವರ್ಷಗಳವರೆಗೆ ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎಂಬಂತಿದ್ದ ಅವಿಭಜಿತ ದಕ್ಷಿಣ ಕನ್ನಡ ಜನರ ಪಾಲಿಗೆ ಬೆಂಗಳೂರು ಕಂಬಳದ ಹೆಸರಲ್ಲಿ ಒಡೆದಿರುವುದು ಅತ್ಯಂತ ನೋವಿನ ಸಂಗತಿ.

ಕಂಬಳ ಎನ್ನುವುದು ಕರಾವಳಿ ಭಾಗದ ಅತ್ಯಂತ ಜನಪ್ರಿಯ ಜಾನಪದ ಕ್ರೀಡೆ.
ಕರಾವಳಿ ಎಂದರೆ ಎಲ್ಲರಿಗೂ ಅರಿವಿಗೆ ಬರುವುದು ಅವಿಭಜಿತ ದಕ್ಷಿಣ ಕನ್ನಡ ಅಂದರೆ ಈಗಿನ ಮಂಗಳೂರು ಜಿಲ್ಲೆ ಮತ್ತು ಉಡುಪಿ ಜಿಲ್ಲೆ. ಕಡಲ ತಡಿಯಿಂದ ಸಾಗುತ್ತಾ ಕಾರವಾರದವರೆಗೂ ಕರಾವಳಿ ಎಂದೇ ಕರೆಯಲಾಗುತ್ತದೆ‌‌.
ಮೊದಲು ಅವಿಭಜಿತ ದಕ್ಷಿಣ ಕನ್ನಡ ಅಂದರೆ ಮಂಗಳೂರು- ಉಡುಪಿ ಸೇರಿಕೊಂಡೆ ಇತ್ತು. ಕೆಲ ವರ್ಷಗಳ ಹಿಂದೆ ಮಂಗಳೂರು ಮತ್ತು ಉಡುಪಿ ಎರಡು ಪ್ರತ್ಯೇಕ ಜಿಲ್ಲೆಗಳಾಗಿ ವಿಂಗಡಣೆಗೊಂಡ ನಂತರ
ಪುತ್ತೂರು, ಸುಳ್ಯ ,ಬೆಳ್ತಂಗಡಿ, ಮಂಗಳೂರು ನಗರ ಸುರತ್ಕಲ್ ಮಂಗಳೂರಿನ ಆಸುಪಾಸು ಎಲ್ಲಾ ಈಗಿನ ಮಂಗಳೂರು ಜಿಲ್ಲೆ ಸೇರಿದರೆ, ಉಡುಪಿ, ಕಾರ್ಕಳ, ಹೆಬ್ರಿ, ಕುಂದಾಪುರ ಬೈಂದೂರು ಭಾಗದವರೆಲ್ಲರೂ ಉಡುಪಿ ಜಿಲ್ಲೆಗೆ ಸೇರಿಕೊಂಡಿದ್ದಾರೆ.

*ಮಂಗಳೂರು ಮಾತ್ರವಲ್ಲದೆ ಉಡುಪಿ- ಕುಂದಾಪುರದಲ್ಲೂ ಕಂಬಳ ನಡೆಯುತ್ತದೆ…*

ಮಂಗಳೂರು ಭಾಗದಲ್ಲಿ ನಡೆಯುವ ಪ್ರಸಿದ್ಧ ಕಂಬಳಗಳು..
ಬಂಟ್ವಾಳದ ಕಾವಳ ಕಟ್ಟೆಯಲ್ಲಿ ನಡೆಯುವ
ಮೂಡೂರು-ಪಡೂರುಕಂಬಳ
ಮತ್ಸೇಂದ್ರನಾಥ-ಗೋರಕನಾಥಕಂಬಳ ಮಂಗಳೂರಿನ ಕದ್ರಿಯಲ್ಲಿ ನಡೆಯುತ್ತದೆ.
ಕೋಟಿ-ಚೆನ್ನಯ್ಯ ಕಂಬಳ ಮೂಡಬಿದ್ರೆ, ಪುತ್ತೂರಿನಲ್ಲಿ ನಡೆಯುತ್ತದೆ.
ಕಾಂತಬಾರೆ-ಬೂದಬಾರೆಕಂಬಳ ಐಕಳದಲ್ಲಿ ನಡೆದರೆ,
ಉಪ್ಪಿನಂಗಡಿಯ ನೇತ್ರಾವತಿ ನದಿ ಸಮೀಪ ನಡೆಯುವ ವಿಜಯ-ವಿಕ್ರಮ ಕಂಬಳವೂ ಪ್ರಸಿದ್ಧ.
ಪಿಲಿಕುಳದಲ್ಲಿ ನಡೆಯುವ
ನೇತ್ರಾವತಿ-ಫಲ್ಗುಣಿ ಕಂಬಳ.

ಉಡುಪಿಯ ಭಾಗದಲ್ಲಿ ನಡೆಯುವ ಕಂಬಳಗಳು..
ಜಯ-ವಿಜಯಕಂಬಳ ಕಾರ್ಕಳದ ಈದು ಮತ್ತು ಜಪ್ಪಿನಮೊಗ್ರುವಿನಲ್ಲಿ ನಡೆಯುತ್ತದೆ.

ಕಾರ್ಕಳದ ಮಿಯ್ಯಾರಿನಲ್ಲಿ ನಡೆಯುವ ಲವ-ಕುಶಕಂಬಳ
ಮುಲ್ಕಿ ಮತ್ತು ಕಟಪಾಡಿ ನಡೆಯುವ ಮೂಡು- ಪಡು ಕಂಬಳ.
ಇನ್ನೂ ಕುಂದಾಪುರ ಭಾಗದಲ್ಲಿ ನಡೆಯುವ ಕಂಬಳಗಳು..

ಬಾರ್ಕೂರಿನ ಪುರಾಣ ಪ್ರಸಿದ್ಧ ಕಂಬಳ..
ಮಂದಾರ್ತಿ ಸಮೀಪದ ಪುರಾಣ ಪ್ರಸಿದ್ಧ ವಂಡಾರು ಕಂಬಳ…ಇಲ್ಲಿ ಕೋಣಗಳು ಕೆಸರು ಗದ್ದೆಯಲ್ಲಿ ಇಳಿದರೆ ಮೂವತ್ತು ಮೈಲಿ ದೂರದ ಕೋಟೇಶ್ವರದ ಕೆರೆಯ ನೀರು ಕೆಸರಾಗುತ್ತದೆ, ರಾಜ ಅಲ್ಲಿಂದ ಇಲ್ಲಿಗೆ ಸುರಂಗ ಮಾರ್ಗ ಮಾಡಿದ್ದ ಎಂಬ ಪ್ರತೀತಿ ಇದೆ.
ಇನ್ನೂ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆಯವರ ಆದಿ ಮನೆ ಕೊರ್ಗಿ ಕಂಬಳವೂ ಪುರಾಣ ಪ್ರಸಿದ್ದ ಕಂಬಳವಾಗಿದೆ. ಬೈಂದೂರು ಭಾಗದಲ್ಲಿ ಪುರಾಣ ಪ್ರಸಿದ್ದ ಕಂಬಳಗಳೂ ನಡೆಯುವ ಉಲ್ಲೇಖವಿದೆ.
ಇನ್ನೂ ಹೆಚ್ಚಿನ ಊರುಗಳಲ್ಲಿ ಕಂಬಗಳ ಗೆದ್ದ ಇಂದಿಗೂ ಇದೆ ಆದರೂ ಹಿಂದಿನವರು ಇಲ್ಲಿ ಕಂಬಳ ನಡೆಸುತ್ತಿದ್ದರು.
ಹೀಗೆ ಕಂಬಳವೂ ಮಂಗಳೂರು ಮಾತ್ರ ಸೀಮಿತವಾಗಿರದೆ ಕುಂದಾಪುರ ಭಾಗದಲ್ಲೂ ಪ್ರಸಿದ್ಧವಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.

ಕಂಬಳ ಎಂದರೆ ಮಂಗಳೂರು ಭಾಗ ಉಡುಪಿ ಭಾಗ ಕುಂದಾಪುರ ಭಾಗ, ಬೈಂದೂರು ಭಾಗ, ಕಾರ್ಕಳ ಭಾಗದಲ್ಲೂ ನಡೆಯುತ್ತದೆ,ಕಂಬಳದ ವಿಷಯದಲ್ಲಿ ಎಲ್ಲರೂ ಸರಿಸಮರು ಇದ್ದಾರೆ.

ಹೀಗಿರುವ ಕಾರಣದಿಂದ ಬೆಂಗಳೂರು ಕಂಬಳದಲ್ಲಿ ತುಳುವರು ಕುಂದಾಪುರ ಭಾಗದ ಜನರನ್ನು ಬದಿಗಿರಿಸಿ ಏಕಚಕ್ರಾಧಿಪತ್ಯ ಮೆರೆಯುತ್ತಿದ್ದಾರೆ ಎಂಬುದು ಮುಖ್ಯ ಆರೋಪ.

ಬೆಂಗಳೂರು ಕಂಬಳಕ್ಕೆ ಕುಂದಾಪುರ ಭಾಗದ ಮಾಜಿ‌ ಶಾಸಕರು, ರಾಜಕೀಯ ಧುರಿಣಿರಿಂದ ದೇಣಿಗೆಯನ್ನು ಸಂಗ್ರಹಿಸಿಯೂ ಕಂಬಳದ ಕಾರ್ಯಸಮಿತಿಯಲ್ಲೂ ಮುಖ್ಯ ವೇದಿಕೆ ಅಥವಾ ವಾಹಿನಿಯಲ್ಲೂ ಕುಂದಾಪುರದವರನ್ನು ಪರಿಗಣಿಸದೇ ಇರುವುದು ಕುಂದಾಪುರ ಭಾಗದ ಜನರ ಬೇಸರ ಮತ್ತು ಆಕ್ರೋಶದ ದನಿಯಾಗಿದೆ.
ಇದು ಕಂಬಳ ಓಟವಾ..? ಇಲ್ಲ ತುಳು ಕೂಟವಾ…!? ಎಂಬುದು ಕುಂದಾಪುರಿಗರ ಪ್ರಶ್ನೆಯಾಗಿದೆ.

*ಪ್ರಸಾದ್ ಶೆಟ್ಟಿ ಸೀತಾನದಿ* .