ಕಾಗವಾಡ-

ಕಾಗವಾಡದಲ್ಲಿ ಉಪನೋಂದಣಿ ಉದ್ಘಾಟನೆಗೊಂಡಿದ್ದು ಈ ಜನರ ಭಾಗದ ತಪ್ಪಿದಂತಾಗಿದೆ, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ನೋಂದಣಾಧಿಕಾರಿ ಮಹಾಂತೇಶ ಪಟಾತರ ಹೇಳಿದರು. ಅವರು ಗುರುವಾರ ದಿ. 15 ರಂದು ಕಾಗವಾಡ ಪಟ್ಟಣದಲ್ಲಿ ಉಪನೊಂದಣಿ ಕಾರ್ಯಾಲಯ ಕಾರ್ಯಾರಂಭ ಮಾಡಿ ಮಾತನಾಡಿದರು. ತಾಲೂಕಿನ ಜನರ ಬಹು ದಿನಗಳ ಬೇಡಿಕೆಯಾಗಿದ್ದ ಉಪನೊಂದಣಿ ಕಛೇರಿ ಕಾರ್ಯಾರಂಭಗೊಂಡಿದ್ದು, ತಾಲೂಕಿನ ಜನತೆಗೆ ದೂರದ ಅಥಣಿಗೆ ಅಲೆದಾಡುವದನ್ನು ತಪ್ಪಿಸಿದಂತಾಗಿದೆ. ಈ ಕಛೇರಿಯಲ್ಲಿ ಆಸ್ತಿ ನೊಂದಣಿ, ವಿವಾಹ ನೊಂದಣಿ, ಹಕ್ಕುಗಳ ವರ್ಗಾವಣೆ, ಕಾವೇರಿ 2.0 ತಂತ್ರಾಂಶದಲ್ಲಿ ಇರುವ ಎಲ್ಲ ಸೇವೆಗಳು ಲಭ್ಯವಿರುತ್ತವೆ. ಈ ಭಾಗದ ಸಾರ್ವಜನಿಕರರು ಇದರ ಸದುಪಯೋಗ ಪಡೆದುಕೊಳ್ಳಬೆಕೆಂದು ಕರೆ ನೀಡಿದರು.

ಈ ವೇಳೆ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಶಿದಗೌಡ ಕಾಗೆ ಮಾತನಾಡಿ, ತಾಲೂಕಿನ ಸಾರ್ವಜನಿಕರ ಬಹುದಿನಗಳ ಬೇಡಿಕೆ ಬಹು ದಿನಗಳಿಂದ ಉಪನೋಂದಣಿ ಅಧಿಕಾರಿಗಳ ಕಾರ್ಯಾಲಯ ಆರಂಬಿಸಬೇಕೆಂಬ ಒತ್ತಾಯ ಇತ್ತು. ಒತ್ತಾಯಕ್ಕೆ ಸ್ಪಂದಿಸಿದ ಕಾಗವಾಡ ಶಾಸಕ ರಾಜು ಕಾಗೆಯವರು ಸರಕಾರದ ಮೇಲೆ ಒತ್ತಡ ತಂದು ಕಾರ್ಯಾಲಯ ಪ್ರಾರಂಭಿಸಿದ್ದಾರೆ.ಇದರಿಂದ ಜುಗೂಳ, ಮಂಗಾವತಿ, ಶಿರಗುಪ್ಪಿ,ಕಾಗವಾಡ, ಶೇಡಬಾಳ ಸೇರಿದಂತೆ ಅನೇಕ ಗ್ರಾಮಗಳ ಜನರ ಕನಸು ಇವತ್ತು ಈಡೇರಿದೆ. ಮುಂಬರುವ ದಿನಗಳಲ್ಲಿ ಕಾಗವಾಡ ಪಟ್ಟಣದಲ್ಲಿ ಇನ್ನೂ ಅನೇಕ ಕಛೇರಿಗಳು ಶೀಘ್ರವಾಗಿ ಕಾರ್ಯಾರಂಭ ಮಾಡಲಿವೆ ಎಂದರು.

ಕಾಗವಾಡ ತಾಲೂಕಿಗೆ ಅತೀ ಅವಶ್ಯಕತೆ ಇದ್ದ ಉಪನೊಂದಣಿ ಹಾಗೂ ವಿವಾಹ ನೊಂದಣಿ ಕಛೇರಿ ಇಂದು ಕಾರ್ಯಾರಂಭಗೊಂಡಿದ್ದು, ಕಾಗವಾಡ ತಾಲೂಕಿನ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಡಾ.ಶಿದಗೌಡ ಕಾಗೆ ಹೇಳಿದರು ಈ ಸಂದರ್ಭದಲ್ಲಿ ತಹಶೀಲ್ದಾರ ಸಂಜಯ ಇಂಗಳೆ, ಕಾಗವಾಡ ಉಪ ನೋಂದಣಾಧಿಕಾರಿ ರಾಜಶೇಖರ ಮುಗ್ಗನ್ನವರ, ಸಿಡಿಪಿಒ ಸಂಜಯಕುಮಾರ ಸದಲಗೆ, ಕ್ಷೇತ್ರ

ಶಿಕ್ಷಣಾಧಿಕಾರಿ ಎಂ.ಆರ್. ಮುಂಜೆ, ಮುಖಂಡರಾದ ವಿಜಯಕುಮಾರ ಅಕಿವಾಟೆ,ಅಣ್ಣಾಸಾಬ ಪಾಟೀಲ, ಶಂಕರ ವಾಘಮೋಡೆ, ರಾಜು ಮದನೆ.ಸಂಜಯ ಸಲಗರೆ, ಶಂಕರ ಮಗದುಮ, ಅರವಿಂದ ಭಂಡಾರೆ.ಜ್ಯೋತಿಕುಮಾರ ಪಾಟೀಲ್, ಕಾಕಾ ಪಾಟೀಲ್, ರಮೇಶ ಚೌಗಲಾ, ನಾಥಗೌಡಾ ಪಾಟೀಲ, ಅನೀಲ ಕಡೋಲೆ, ಉಮೇಶ ಪಾಟೀಲ್, ಸುನೀಲ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.