ದೆಹಲಿ :
ಭಾನುವಾರ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ.

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದೆ. ಈ ರಾಜ್ಯಗಳಲ್ಲಿ ಇದೀಗ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಪಕ್ಷಕ್ಕಾಗಿ ಹಗಲು ರಾತ್ರಿ ಬೆವರು ಸುರಿಸಿದ ನಾಯಕರ ಹೆಸರು ಈಗ ಮುಖ್ಯಮಂತ್ರಿ ಹುದ್ದೆಗೆ ತೇಲಿ ಬಂದಿದೆ.

ನಾಲ್ಕೂ ರಾಜ್ಯಗಳ ಮುಖ್ಯಮಂತ್ರಿ ಹುದ್ದೆಗೆ ಭಾರಿ ಪೈಪೋಟಿ ಏರ್ಪಟ್ಟಿದೆ. ಯಾರು, ಯಾರು ಪೈಪೋಟಿಯಲ್ಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ

ರಾಜಸ್ಥಾನ: ದಿಯಾ ಕುಮಾರಿ, ವಸುಂಧರಾ ರಾಜೇ,
ಗಜೇಂದ್ರ ಸಿಂಗ್ ಶೆಖಾವತ್, ಮಹಂತ ಬಾಲಕನಾಥ, ಕಿರೋಡಿ ಮಲ್ ಮೀನಾ, ಸಿ.ಪಿ. ಜೋಶಿ, ಅರ್ಜುನ್ ಸಿಂಗ್ ಮೇಘವಾಲ್, ಓಂ ಬಿರ್ಲಾ

ಮಧ್ಯ ಪ್ರದೇಶ: ಶಿವರಾಜ್ ಸಿಂಗ್ ಚೌಹಾಣ್, ಜ್ಯೋತಿರಾದಿತ್ಯ ಸಿಂಧಿಯಾ, ನರೇಂದ್ರ ಸಿಂಗ್ ತೋಮ‌ರ್

ಛತ್ತೀಸಗಢ: ರಮಣ ಸಿಂಗ್, ಅರುಣ್ ಕುಮಾ‌ರ್ ಸಾವ್, ಧರಮ್ ಲಾಲ್ ಕೌಶಿಕ್, ಒ.ಪಿ. ಚೌಧರಿ

ತೆಲಂಗಾಣ: ರೇವಂತ ರೆಡ್ಡಿ