ಐಜ್ವಾಲ್ :
ಮಿಜೋರಾಂ ಮುಖ್ಯಮಂತ್ರಿ ಜೋರಾಮ್‌ತಂಗಾ ಅವರು ಐಜ್ವಾಲ್ ಪೂರ್ವ–1 ಕ್ಷೇತ್ರದಲ್ಲಿ ಜೆಡ್‌ಪಿಎಂ ಅಭ್ಯರ್ಥಿ ಲಾಲ್‌ಥನ್ ಸಂಗಾ ಎದುರು ಹಿನ್ನಡೆ ಅನುಭವಿಸಿದ್ದಾರೆ.

26 ಕ್ಷೇತ್ರಗಳಲ್ಲಿ ಜೆಡ್‌ಪಿಎಂ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದು, ಎಂಎನ್‌ಎಫ್ 11, 1ರಲ್ಲಿ ಕಾಂಗ್ರೆಸ್ ಮತ್ತು 2 ಕ್ಞೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಮುನ್ನಡೆ ದಾಖಲಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಪಕ್ಷದ ಮುಖ್ಯಸ್ಥ ಲಾಲ್ ಥನ್ಹಾವ್ಹಾ ಹೀನಾಯವಾಗಿ ಸೋತಿದ್ದಾರೆ. ಐಜ್ವಾಲ್ ಪೂರ್ವ-1 ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿಎಂ ವಿರುದ್ಧ ಝಜಿಎಂ ಅಭ್ಯರ್ಥಿ ಲಾಲತಂಸಂಗ ಅವರು 2101 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇಲ್ಲಿಯವರೆಗೆ ಝಪಿಎಂ 14, ಎಂಎನ್ ಎಫ್ 3 ಮತ್ತು ಬಿಜೆಪಿ 2 ಸ್ಥಾನಗಳನ್ನು ಗೆದ್ದಿದೆ. ಝಜಿಎಂ 13 ಸ್ಥಾನಗಳಲ್ಲಿ, ಎಂಎನ್ ಎಫ್ 7 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್‌ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.