ಬೆಳಗಾವಿ :
ಬೆಳಗಾವಿಯ ಖ್ಯಾತ ವೈದ್ಯೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಡಾ.ಸೋನಾಲಿ ಸರ್ನೋಬತ್ ಅವರು ತಮ್ಮ ನಿಯತಿ ಫೌಂಡೇಶನ್ ವತಿಯಿಂದ ಬೆಳಗಾವಿಯ ನರ್ಸಿಂಗ್ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿನಿ ಕಾಂಚನಾ ಪಾಟೀಲ ಅವರಿಗೆ ಹತ್ತು ಸಾವಿರ ರೂಪಾಯಿಗಳ ವಿದ್ಯಾರ್ಥಿವೇತನವನ್ನು ಕೊಡಮಾಡಿದ್ದಾರೆ.

ಡಾ.ಸೋನಾಲಿ ಸರ್ನೋಬತ್ ಮತ್ತು ಡಾ.ಸಮೀರ್ ಸರ್ನೋಬತ್ ಅವರು ವಿದ್ಯಾರ್ಥಿ ವೇತನವನ್ನು ನೀಡಿದರು.

ಕಾಂಚನಾ ಅವರು ಡಾ.ರವಿ ಪಾಟೀಲ ನರ್ಸಿಂಗ್ ಕಾಲೇಜಿನಲ್ಲಿ ಎರಡನೇ ವರ್ಷದ ನರ್ಸಿಂಗ್ ಕೋರ್ಸ್‌ನಲ್ಲಿ ಓದುತ್ತಿದ್ದಾರೆ. ಆಕೆಯ ತಂದೆ ಮೇಸ್ತ್ರಿ ಮತ್ತು ತಾಯಿ ಗೃಹಿಣಿ. ಆದರೆ, ಅವರ ಮಗಳು ಪ್ರತಿಭಾನ್ವಿತಳು. ನರ್ಸ್ ಆಗುವ ಮೂಲಕ ಮಾನವಕುಲದ ಸೇವೆ ಮಾಡಲು ಬಯಸಿದ್ದು, ಪ್ರತಿಭಾವಂತ ವಿದ್ಯಾರ್ಥಿನಿಗೆ ಇದೀಗ ಸೋನಾಲಿ ಸರ್ನೋಬತ್ ಅವರು ಸಹಾಯ ಹಸ್ತ ಚಾಚಿದ್ದಾರೆ.