ಬೆಳಗಾವಿ : ಬೆಳಗಾವಿಯ ನಿಯತಿ ಫೌಂಡೇಶನ್ ವತಿಯಿಂದ ಬಡ ವಿದ್ಯಾರ್ಥಿಯೊಬ್ಬರ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲಾಯಿತು.

ತಹಸೀಲ್ದಾರ್ ಗಲ್ಲಿಯಲ್ಲಿ ವಾಸವಾಗಿರುವ ವಿದ್ಯಾರ್ಥಿ ರಚಿತ್ ಪಾಟೀಲ ಅವರು ಆರ್ಥಿಕವಾಗಿ ಬಡವರು. ಇತ್ತೀಚೆಗಷ್ಟೇ ಅವರ ತಂದೆ ಶಸ್ತ್ರಚಿಕಿತ್ಸೆಗೆ ಒಳಗಾದ ಕಾರಣ ಅವರ ಮನೆಯ ಸಂಪೂರ್ಣ ಹೊರೆ ಅವರ ತಾಯಿಯ ಮೇಲಿದೆ. ಇಂತಹ ಪರಿಸ್ಥಿತಿಯಲ್ಲಿ ರಚಿತ್ ಅವರ ಶಾಲೆಯ ಖರ್ಚು-ವೆಚ್ಚ ಭರಿಸುವುದು ಕುಟುಂಬಕ್ಕೆ ಕಷ್ಟವಾಗಿದ್ದು, ರಚಿತ್ ಅವರ ವಿದ್ಯಾಭ್ಯಾಸಕ್ಕೆ ನಿಯತಿ ಫೌಂಡೇಶನ್ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.

ಬಿ. ಇ.ಸೊಸೈಟಿಯ ಮಾಡರ್ನ್ ಆಂಗ್ಲ ಶಾಲೆಯಲ್ಲಿ 4ನೇ ತರಗತಿ ಓದುತ್ತಿರುವ ರಚಿತ್ ಅವರಿಗೆ ಆರ್ಥಿಕ ಬೆಂಬಲ ನೀಡಲು ಮುಂದೆ ಬರುವವರು ನಿಯತಿ ಫೌಂಡೇಶನ್ ಅನ್ನು ಸಂಪರ್ಕಿಸುವಂತೆ ಡಾ. ಸೋನಾಲಿ ಸರ್ನೋಬತ್ ಮನವಿ ಮಾಡಿದ್ದಾರೆ.