ಬೆಳಗಾವಿ :
ದಿನಾಂಕ 05.01.2024 ರಂದು ಬೆಳಗ್ಗೆ 9:30 ಗಂಟೆಗೆ ಪೊಲೀಸ್ ಕಮಿಷನರೇಟ್ ಬೆಳಗಾವಿ ನಗರರವರ ಪ್ರಾಯೋಜಕತ್ವದಲ್ಲಿ ಮಾದಕ ವಸ್ತುಗಳ ವ್ಯಸನ ಮುಕ್ತ ಜಾಗೃತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಚೆನ್ನಮ್ಮ ಸರ್ಕಲ್ ನಿಂದ ಶನಿವಾರಖೂಟ್ ಮುಖಾಂತರ ಯಂಡೆ ಖೂಟವರೆಗೆ ನಡೆಯುವ ಈ ಜಾಥಾದಲ್ಲಿ ನಗರದ ವಿವಿಧ ಶಾಲಾ ಮಕ್ಕಳು ಹಾಗೂ ಪೊಲೀಸ್ ಸಿಬ್ಬಂದಿಯವರು ಭಾಗವಹಿಸಲಿದ್ದಾರೆ.