ಬೆಳಗಾವಿ :
ಮಹಿಳೆಯ ಮೂಗು ಕಟ್ ಮಾಡಿದ ವ್ಯಕ್ತಿಯನ್ನು ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯ ಬಸುರ್ತೆ ಗ್ರಾಮದಲ್ಲಿ ಅಂಗನವಾಡಿ ಶಿಕ್ಷಕಿ ಮೀರಾ ಮೋರೆ ಅವರೊಡನೆ ತಂಟೆ ಮಾಡಿ, ಕುಡುಗೋಲಿನಿಂದ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಪ್ರ ಸಂ. 02/2024 ಕಲಂ. 326 ಐಪಿಸಿ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಈ ಪ್ರಕರಣದ ಆರೋಪಿತ ಕಲ್ಲಪ್ಪ @ ಕಲ್ಯಾಣಿ ಜ್ಯೋತಿಬಾ ಮೋರೆ (ವಯಸ್ಸು 44 ವರ್ಷ) ಸಾ|| ದತ್ತ ಗಲ್ಲಿ, ಬಸುರ್ತೆ ಗ್ರಾಮ, ಈತನನ್ನು ಕಾಕತಿ ಪೊಲೀಸರು ಇಂದು ದಿನಾಂಕ 04.01.2023 ರಂದು ಬಸುರ್ತೆ ಗ್ರಾಮದ ಸರಕಾರಿ ಗುಡ್ಡದಲ್ಲಿ ದಸ್ತಗಿರಿ ಮಾಡಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.